March 22, 2026

ಬಂಟ್ವಾಳ: ಮೂರ್ಛೆ ರೋಗದ ಬಾದೆಯಿರುವ ವ್ಯಕ್ತಿ ನಾಪತ್ತೆ: ದೂರು ದಾಖಲು

0
image_editor_output_image290348782-1692370281919.jpg

ಬಂಟ್ವಾಳ: ಮೂರ್ಛೆ ರೋಗದ ಬಾದೆಯಿರುವ ವ್ಯಕ್ತಿಯೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿ.ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಶಿವರಾಮ ಪೂಜಾರಿ ಅವರ ಮಗ ಹರೀಶ್ ಪೂಜಾರಿ( 48) ಕಾಣೆಯಾದ ವ್ಯಕ್ತಿ.

ವಿಪರೀತ ಕುಡಿತದ ಚಟ ಹೊಂದಿರುವ ಹರೀಶ್ ಮೂರ್ಛೆ ರೋಗ ಬಾಧಿಸುವ ವೇಳೆ ತಲೆ ಸರಿ ಇಲ್ಲದಂತೆ ವರ್ತಿಸುತ್ತಿದ್ದ. ಅಲ್ಲದೆ ಕೆಲವೊಮ್ಮೆ ಈ ರೋಗ ಶುರುವಾದ ವೇಳೆ ಮನೆಯಿಂದ ಹೊರಗೆ ಹೋಗಿ ಮತ್ತೆ ವಾಪಸು ಮನೆಗೆ ಬರುತ್ತಿದ್ದ. ಆದರೆ ಅಗಸ್ಟ್ 17 ರಂದು ಮುಂಜಾನೆ ಐದು ಗಂಟೆ ವೇಳೆ ಈತ ಮಲಗಿದ್ದ ಕೋಣೆಯನ್ನು ನೋಡಿದಾಗ ಬಾಗಿಲು ತೆಗೆದುಕೊಂಡಿದ್ದು ಈತ ಕೋಣೆಯಲ್ಲಿ ಕಾಣಸಿಗದೆ ನಾಪತ್ತೆಯಾಗಿದ್ದಾನೆ. ಈಗಾಗಿ ಈತನನ್ನು ಪತ್ತೆ ಹಚ್ಚಿಕೊಡುವಂತೆ ಈತನ ತಂದೆ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!