December 20, 2025

ಕುಂದಾಪುರ: ವಕೀಲರಿಗೆ ತಂಡದಿಂದ ಹಲ್ಲೆ: ಬೈಂದೂರು ವಕೀಲರ ಸಂಘದಿಂದ ಖಂಡನೆ

0
IMG-20230611-WA0014.jpg


 
ಕುಂದಾಪುರ: ಪ್ರಕರಣವೊಂದಕ್ಕೆ ವಕಾಲತ್ತು ಮಾಡುತ್ತಿರುವುದನ್ನೇ ಪ್ರಶ್ನಿಸಿ ತಂಡವೊಂದು ವಕೀಲರೊಬ್ಬರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಘಟನೆ ಶಿರೂರು ಕೋಟೆಮನೆ ದುರ್ಗಾಂಬಿಕೆ ದೇವಸ್ಥಾನದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಬೈಂದೂರು ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಮತ್ತು ಬೈಂದೂರು ವಕೀಲರ ಸಂಘದ ಸದಸ್ಯ ಗಣೇಶ್ ಮೇಸ್ತ ಎಂಬುವರೇ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು.

ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಬೈಂದೂರು, ಕುಂದಾಪುರ ಹಾಗೂ ಹೈಕೋರ್ಟ್ ನಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಒಂದು ತಂಡದ ಪರವಾಗಿ ಗಣೇಶ್ ಮೇಸ್ತಾ ವಕಾಲತ್ತು ಮಾಡುತ್ತಿದ್ದರು. ಆಗಸ್ಟ್ 16ರ ಬುಧವಾರ ಆಟಿ ಅಮವಾಸ್ಯೆ ಪ್ರಯುಕ್ತ ಶಿರೂರಿನ ಕೋಟೆಮನೆ ದುರ್ಗಾಂಬಿಕೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲೆಂದು ವಕೀಲ ಗಣೇಶ ಮೇಸ್ತಾ ಹೋಗಿದ್ದರು ಈ ಸಂದರ್ಭ ಮಧ್ಯಾಹ್ನ 12 ಗಂಟೆಗೆ ವಕೀಲರ ಎದುರು ಪಾರ್ಟಿಗಳ ಪೈಕಿ ನವೀನ್ ಮೇಸ್ತ, ಕೆ.ಎನ್.ಆಚಾರ್, ಶ್ರೀಧರ್ ಮೇಸ್ತ, ಗಿರೀಶ್ ಮೇಸ್ತ, ಸುಧಾಕರ ಮೇಸ್ತ, ಅಣ್ಣಪ್ಪ ವಿ ಮೇಸ್ತ, ಪ್ರಕಾಶ್ ವಿ ಮೇಸ್ತ, ರಾಘವೇಂದ್ರ ಗಣಪತಿ ಮೇಸ್ತ, ಚಂದ್ರಶೇಖರ‌ ಮೇಸ್ತ ಸೇರಿದಂತೆ 11 ಜನರ ತಂಡ ಏಕಾಏಕೀ ಹಲ್ಲೆ‌ ನಡೆಸಿ, ಜೇಬಿನಲ್ಲಿದ್ದ 5 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು, ಕೊಲೆ ಬೆದರಿಕೆ ಹಾಕಿದೆ ಎಂದು ಹಲ್ಲೆಗೊಳಗಾದ ಗಣೇಶ್ ಹೇಳಿದ್ದಾರೆ.

ಘಟನೆ ನಡೆದು 12 ಗಂಟೆಗಳಾದರೂ ಪೊಲೀಸರು ಎಫ್.ಐ.ಆರ್. ಮಾಡಿಲ್ಲ. ಗಾಯಾಳು ವಕೀಲರ ಹೇಳಿಕೆ ಪಡೆದಿಲ್ಲ. ಯಾವುದೇ ಒತ್ರಡಕ್ಕೆ ಮಣಿಯದೇ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೋಬಿ ಆಗ್ರಹಿಸಿದ್ದಾರೆ.

ವಕೀಲರ‌ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿರುವುದು ಖಂಡನೀಯ. ತಕ್ಷಣ ಆರೋಪಿಗಳನ್ನು ಬಂಧಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೈಂದೂರು ವಕೀಲರ ಸಂಘದ ಕಾರ್ಯದರ್ಶಿ ಪ್ರಶಾಂತ ಪೂಜಾರಿ ಹೇಳಿದ್ದಾರೆ. ಈ ಸಂದರ್ಭ ಆಸ್ಪತ್ರೆಯಲ್ಲಿ ವಕೀಲೆ ಪಿಂಕಿ ಮೊದಲಾದವರು ಉಪಸ್ಥಿತರಿದ್ದರು”

Leave a Reply

Your email address will not be published. Required fields are marked *

You may have missed

error: Content is protected !!