ಟಿಪ್ಪುನಗರ :ಎಚ್.ಟಿ.ಎಫ್.ಸಿ. ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ವಿಟ್ಲ :ನಾವೆಲ್ಲರೂ ಪರಸ್ಪರ ಪ್ರೀತಿ ,ಒಗ್ಗಟ್ಟಿನಿಂದ ಬಾಳ ಬೇಕು ಏಕೆಂದರೆ ಸೌಹಾರ್ದ ಸಮಾಜದಿಂದ ಮಾತ್ರ ಸುಂದರ ಹಾಗೂ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ವಿಟ್ಲ.ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಸಂದೇಶ ಶೆಟ್ಟಿ ಅವರು ಹೇಳಿದರು.
ಕೊಡಂಗಾಯಿ ಟಿಪ್ಪುನಗರದ ಸಾಮಾಜಿಕ ಸಂಘಟನೆಯಾದ ಎಚ್.ಟಿ.ಎಫ್.ಸಿ.ವತಿಯಿಂದ ಟಿಪ್ಪುನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.
ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸಂದೇಶ ಭಾಷಣ ನಡೆಸಿದರು.
ಸಮಾರಂಭದಲ್ಲಿ ಅದ್ರಾಮ ಕಡಂಬು, ಮುಹಮ್ಮದ್ ಕೆ.ಎಸ್., ಜನಾರ್ದನ, ಹಮೀದ್ ಕುಕ್ಕಿಲ ಮೊದಲಾದವರು ಉಪಸ್ಥಿತರಿದ್ದರು.
ಸತ್ತಾರ್ ಟಿಪ್ಪುನಗರ ಸ್ವಾಗತಿಸಿದರು. ಎಚ್.ಟಿ.ಎಓ್.ಸಿ ಪ್ರಮುಖರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ವಂದಿಸಿದರು.






