ಕಾರ್ಕಳ: ಡ್ರಂಕ್ ಆ್ಯಂಡ್ ಡ್ರೈವ್, ತರಕಾರಿ ಅಂಗಡಿಗೆ ನುಗ್ಗಿಸಿದ ಕಾರು ಚಾಲಕ
ಕಾರ್ಕಳ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪರಿಣಾಮ ಕಾರೊಂದು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಕಾರ್ಕಳದ ಬೈಲೂರು ಮುಖ್ಯರಸ್ತೆಯಲ್ಲಿ ಸಂಭವಿಸಿದೆ.
ಬೆಂಗಳೂರು ಮೂಲದ ನಾಲ್ವರು ಪುಣ್ಯಕ್ಷೇತ್ರಗಳ ಯಾತ್ರೆ ಮುಗಿಸಿ ಕಡಲ ತೀರ ವೀಕ್ಷಿಸಲೆಂದು ಮಲ್ಪೆಗೆ ಹೋಗುತ್ತಿದ್ದರು.
ಮದ್ಯದ ಬಾಟಲಿಗಳನ್ನು ಖರೀದಿಸಿ ಕಾರಿನಲ್ಲಿ ಶೇಖರಿಸಿಟ್ಟಿದ್ದರು.
ಪಾನಮತ್ತರಾಗಿ ಕಾರು ಚಲಾಯಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ.
ಗಾಡಿ ಡಿಕ್ಕಿ ಹೊಡೆದ ಬಳಿಕ ಪರಾರಿಯಾಗಲು ಗಾಡಿಯನ್ನು ಹಿಮ್ಮುಖ ಚಾಲನೆ ಮಾಡಿ ಮುಂದೆ ಚಲಿಸುವ ಸಂದರ್ಭ ಟೈಯರ್ ಪಂಕ್ಚರ್ ಆಗಿದ್ದರಿಂದ ಗಾಡಿ ಅಲ್ಲೇ ನಿಂತುಹೋಗಿದೆ.
ಹೀಗಾಗಿ ಕಾರಿನಲ್ಲಿದ್ದವರಿಗೆ ಪರಾರಿಯಾಗಲು ಸಾಧ್ಯವಾಗಿಲ್ಲ.





