ಮುಸ್ಲಿಮರ ಕೈಯನ್ನು ಕತ್ತರಿಸಬೇಕೆಂಬ ಪ್ರಚೋದನಕಾರಿ ಭಾಷಣ: ಬಜರಂಗದಳದ ಮುಖಂಡನ ವಿರುದ್ಧ FIR ದಾಖಲು
ಉಡುಪಿ: ಕಾರ್ಕಳದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಪುನೀತ್ ಅತ್ತಾವರ ಹಾಗು ಕಾರ್ಕಳ ಭಜರಂಗದಳ ನಗರ ಸಂಚಾಲಕ ಸಂಪತ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ.
ಆ. 13 ರ ಭಾನುವಾರದಂದು ಕಾರ್ಕಳ ನಗರ ಭಜರಂಗದಳ ವತಿಯಿಂದ ಕಾರ್ಕಳದಲ್ಲಿ ಪಂಜಿನ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು.
ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ಪುನೀತ್ ಅತ್ತಾವರ ಬ್ಯಾರಿ (ಮುಸ್ಲಿಮರ) ಯಾವ ಕೈಯಿಂದ ಗೋಮಾತೆಯನ್ನು ಕಡಿಯುತ್ತಾನೋ, ಅವನ ದೇಹದಿಂದ ಅದೇ ಕೈಯನ್ನು ಬೇರ್ಪಡಿಸುವ ಸಂಕಲ್ಪ ತೊಡಬೇಕೆಂಬ ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.





