July 13, 2026

ಕೊಡಂಗಾಯಿ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

0
IMG-20230815-WA0061.jpg

ವಿಟ್ಲ: ಕೊಡಂಗಾಯಿ ಜುಮಾ ಮಸ್ಜಿದ್ ನಲ್ಲಿ 76 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ನಡೆಯಿತು. ಮುಹ್ಯಿದ್ದೀನ್ ಜುಮಾ ಮಸ್ಜಿದ್ ಕೊಡಂಗಾಯಿ ಇದರ ಅಧ್ಯಕ್ಷರಾದ ಎ.ಎಂ ಮಹಮ್ಮದ್ ಕುಂಞಿ ಇವರು ಧ್ವಜಾರೋಹಣ ನೆರವೇರಿಸಿದರು.

ಜುಮಾ ಮಸ್ಜಿದ್ ಖತೀಬರಾದ ಸಿದ್ದೀಖ್ ಅರ್ಶದಿ ಉಸ್ತಾದರು ಅಗಲಿದ ಮಹಾತ್ಮರನ್ನು ಸ್ಮರಿಸುತ್ತಾ, ಅವರಿಗಾಗಿ ಪ್ರಾರ್ಥನೆ ಮಾಡಿ,‌ ದೇಶಾಭಿಮಾನ ದೇಶ ಪ್ರೇಮ ಈಮಾನಿನ ಭಾಗವಾಗಿದೆ, ನಾವೆಲ್ಲರೂ ಒಗ್ಗಟ್ಟಾಗಿ ಜೀವಿಸೋಣ ಎಂಬ ಸಂದೇಶ ನೀಡಿದರು. ಸಿರಾಜುಲ್ ಇಸ್ಲಾಂ ಮದ್ರಸ, ಶಂಸುಲ್ ಹುದಾ ಮದ್ರಸ, ಮದ್ರಸತ್ತುನ್ನೂರಿಯಾ ಮದ್ರಸ ವಿಧ್ಯಾರ್ಥಿಗಳು ರಾಷ್ಟ್ರ ಗೀತೆ ಹಾಡಿದರು.

ಮದ್ರಸ ವಿಧ್ಯಾರ್ಥಿಗಳು ರಚಿಸಿದ ಭವ್ಯ ಭಾರತದ ಚಿತ್ರ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರು, ಪೋಷಕ ವ್ರಂದ, ವಿವಿಧ ಕಮೀಟಿಯ ಸದಸ್ಯರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!