ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವ ಆಚರಣೆ
ವಿಟ್ಲ : ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಝುಬೈರ್ ಮಾಸ್ಟರ್ ಧ್ವಜಾರೋಹಣ ಮಾಡಿದರು.
ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಕಾರ್ಯದರ್ಶಿ ನೋಟರಿ ಅಬೂಬಕರ್ ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್,ಮೇಲ್ವಿಚಾರಕ ಗಫೂರ್ ಮೇಗಿನಪೇಟೆ, ಕೋಶಾಧಿಕಾರಿ ಅಂದುಞಿ ಗಮಿ, ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ,ಕೋಶಾಧಿಕಾರಿ ಶರೀಫ್ ಪೊನ್ನೋಟು, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಲೆಕ್ಕ ಪರಿಶೋಧಕ ಇಕ್ಬಾಲ್ ಮೇಗಿನಪೇಟೆ,ಟ್ರಸ್ಟಿಗಳಾದ ಅಝೀಝ್ ಸನ,ಅಬ್ದುಲ್ ರಹಿಮಾನ್ ದೀಪಕ್, ಇಕ್ಬಾಲ್ ಹಳೆಮನೆ,ಮುಸ್ತಫಾ ಖಲೀಲ್ ಮೇಗಿನಪೇಟೆ ,ಹನೀಫ್ ಎಂ.ಎ, ವಿ.ಪಿ ಅಶ್ರಫ್ ,ಸದರ್ ಉಮ್ಮರ್ ಸಅದಿ,ಅಬೂಬಕರ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕಿ ವಿದ್ಯಾ ಕುಮಾರಿ ವಂದಿಸಿ, ಹಸೀನಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪೇಟೆಯಲ್ಲಿ ಕೇಸರಿ,ಬಿಳಿ,ಹಸಿರು ಬಣ್ಣದ ಉಡುಪು ಧರಿಸಿ ಸಂಚರಿಸಿದ ಮಕ್ಕಳ ಮೆರವಣಿಗೆ ನಯನ ಮನೋಹರವಾಗಿತ್ತು.





