ಪುತ್ತೂರು: ಸಮನ್ವಯ ಶಿಕ್ಷಣದಿಂದ ಸುಸಂಸ್ಕೃತ ಸಮಾಜದ ಸೃಷ್ಟಿಗೆ ಸಹಕಾರಿ: ಉದ್ಯಮಿ ಅಮ್ಜದ್ ಖಾನ್
ಪುತ್ತೂರು: ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣವನ್ನೂ ಸಮನ್ವಯಿಸಿ ಪಡೆದಾಗ ವೈಯಕ್ತಿಕವಾಗಿ ಧಾರ್ಮಿಕ ಪ್ರಜ್ಞೆ ಯೊಂದಿಗೆ ಜೀವನ ನಡೆಸಿ ಆ ಮೂಲಕ ಸುಂದರ ,ಸುಸಂಸ್ಕೃತ ಸಮಾಜವನ್ನು ಕಟ್ಟಲು ಸಾಧ್ಯವಾಗುವುದು ಎಂದು ಕಮ್ಯುನಿಟಿ ಸೆಂಟರ್ ಅಧ್ಯಕ್ಷ , ಅನಿವಾಸಿ ಉದ್ಯಮಿ ಅಮ್ಜದ್ ಖಾನ್ ಅವರು ಹೇಳಿದರು.
ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ವಿವಿಧ ಸಾಹಿತ್ಯ ಕಲಾ ಕಾರ್ಯಕ್ರಮಗಳನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು.
ಮಹಿಳೆಯರಿಗೆ ದೈನಂದಿನ ಓದುವ ಪವಿತ್ರ ಕುರ್ ಆನ್ ಮತ್ತು ಹದೀಸ್ ಗಳ ಅರ್ಥ ತಿಳಿದು ಕೊಳ್ಳಲು ಈ ಸಮನ್ವಯ ಶಿಕ್ಷಣ ನೀಡುವ ಮಹಿಳಾ ಶರೀಅತ್ ಕಾಲೇಜ್ ಗಳು ಸಹಕಾರಿಯಾಗಿದ್ದು, ಇಲ್ಲಿನ ಕಾಲೇಜ್ ನ ವಿದ್ಯಾರ್ಥಿನಿಯರು ಶರೀಅತ್ ಜೊತೆಗೆ ಪಿಯುಸಿ ಯಲ್ಲೂ ಉತ್ತಮ ಸಾಧನೆಯನ್ನು ಮಾಡಿ ಮೀಫ್ ನಿಂದ ಎರಡು ಬಾರಿ ಪ್ರಶಸ್ತಿ ಪಡೆದಿರುವುದು ಗಮನಾರ್ಹ ವಾಗಿದೆ ಎಂದ ಅವರು, ಮುಂದೆ ಇನ್ನಷ್ಟು ಸಾಧನೆ ಮಾಡಿರಿ , ಶಿಕ್ಷಣಕ್ಕೆ ಬೇಕಾಗಿ ಎಲ್ಲಾ ರೀತಿಯ ಸಹಕಾರವನ್ನು ನಮ್ಮಿಂದ ನಿಮಗೆ ಸಿಗಲಿದೆ ಎಂದು ಭರವಸೆಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್ ಅವರು ಮಾತನಾಡಿ, ಸುಶಿಕ್ಷಿತ ಸಮಾಜದಿಂದ ಮಾತ್ರ ಬಲಿಷ್ಠ ಸಮಾಜದ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದರು. ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಕರೆಸ್ಪಾಂಡೆಂಟ್ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಅವರು ವಿದ್ಯಾರ್ಥಿನಿಯರು ರಚಿಸಿದ ಸಾಹಿತ್ಯ ಕೃತಿಯನ್ನು ಬಿಡುಗಡೆ ಗೊಳಿಸಿದರು. ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಮನ್ವಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಶಿಕ್ಷಕ ಅಶ್ರಫ್ ,ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಕೂಟತ್ತಾನ, ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಪಿ.ಯು.ಉಪನ್ಯಾಸಕಿ ಸಾಜಿದ ಸ್ವಾಗತಿಸಿದರು. ಶಾಲಾ ಶಿಕ್ಷಕ ಅಬ್ದುಲ್ ರವೂಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ವಂದಿಸಿದರು.
ಉದ್ಗಾಟನಾ ಕಾರ್ಯಕ್ರಮದ ಬಳಿಕ ಕಾಲೇಜ್ ವಿದ್ತಾರ್ಥಿನಿಯರಿಂದ ವಿವಿಧ ಸಾಹಿತ್ಯ ಕಲಾ ಕಾರ್ಯಕ್ರಮವು ಕಾಲೇಜ್ ಒಳಾಂಗಣದಲ್ಲಿ ಜರಗಿತು. ಉಪನ್ಯಾಸಕಿಯರಾದ ಮಿಶ್ರಿಯಾ ಅಸ್ವಾಲಿಹಾ ಮತ್ತು ಫಾರಿಶಾ ಅಸ್ವಾಲಿಹಾ ಮತ್ತು ಅಶ್ವಿರಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.





