March 19, 2026

ಬೆಳ್ತಂಗಡಿ: ಚಾರ್ಮಾಡಿ ಬಳಿ ಗಾಂಜಾ ಮಾರಾಟ ಯತ್ನ: ಓರ್ವ ಪೊಲೀಸರ ವಶಕ್ಕೆ

0
IMG-20230504-WA0062.jpg

ಬೆಳ್ತಂಗಡಿ: ಬೆಳ್ತಂಗಡಿ ಸಮೀಪದ ಚಾರ್ಮಾಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೂಲತಃ ಕಕ್ಕಿಂಜೆ ನಿವಾಸಿಯಾಗಿರುವ,‌ ಪ್ರಸ್ತುತ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ ಲಕ್ಶ್ಮಣಕಟ್ಟೆ ಬಳಿಯ ನೌಫಲ್ ಎಂದು ಗುರುತಿಸಲಾಗಿದೆ. ಆರೋಪಿ ಪೊಲೀಸರನ್ನು ಕಂಡು ಸಂಶಯಾಸ್ಪದವಾಗಿ ವರ್ತಿಸಿದ್ದು ಈ ಸಂದೇಗೊಂಡು ವಿಚಾರಿಸಲು ಆತನ ಬಳಿ ಬಂದಾಗ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.

ಆತನ‌ ಬಳಿ ಪ್ಲಾಸ್ಟಿಕ್ ಕೈಚೀಲದಲ್ಲಿ 150 ಗ್ರಾಂ ನಷ್ಟು ಗಾಂಜಾದ ಮೊಗ್ಗು, ಎಲೆ ಮತ್ತು ಬೀಜ ಇರುವುದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು 4 ಸಾವಿರ ರೂ.ಆಗಿದ್ದು, ಈ ಬಗ್ಗೆ ಎನ್‌ಡಿಪಿಎಸ್ ಕಾಯ್ದೆಯಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!