March 19, 2026

ಕಟಪಾಡಿ: ಡಿವೈಡರ್ ಏರಿ ಬೈಕ್ ಗೆ ಕಾರು ಢಿಕ್ಕಿ, ಸವಾರರಿಬ್ಬರು ಗಂಭೀರ

0
image_editor_output_image1077429074-1691991217942.jpg

ಉಡುಪಿ: ಡಿವೈಡರ್ ಏರಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.

ಕಾಪು ತಾಲೂಕಿನ ಎರ್ಮಾಳ್ ನಿವಾಸಿ ಧೀರಜ್ ಮತ್ತು ಪವಿತ್ರ ದಂಪತಿ ಗಾಯಗೊಂಡವರು.

ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅವರು ಕೆಲಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಗಾಯಾಳುಗಳನ್ನು ಸಮಾಜ ಸೇವಕರಾದ ಆಸ್ಟಿನ್ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!