May 14, 2026

ವಿಟ್ಲ: ಆಟೋ ರಿಕ್ಷಾಕ್ಕೆ ಅಡ್ಡ ಬಂದ ಮುಂಗುಸಿ: ಪ್ರಾಣ ಉಳಿಸಲು ಹೋದ ಆಟೋ ಪಲ್ಟಿ, ಚಾಲಕ ಗಂಭೀರ

0
IMG-20230813-WA0029.jpg

ವಿಟ್ಲ : ರಸ್ತೆಯಲ್ಲಿ ಅಡ್ಡ ಬಂದ ಮುಂಗುಸಿಯ ಪ್ರಾಣ ಉಳಿಸುವ ಸಂದರ್ಭ ಆಟೋ ಪಲ್ಟಿಹೊಡೆದು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ನಡೆದಿದೆ.

ಮಂಗಲಪದವು ನಿವಾಸಿ ಆಟೋ ಚಾಲಕ ಇಸ್ಮಾಯಿಲ್ (53) ಗಾಯಾಳು.

ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸೇತುವೆ ಬದಿಯಲ್ಲಿ ರಸ್ತೆ ದಾಟುತ್ತಿದ್ದ ಮುಂಗುಸಿಯೊಂದು ಅಡ್ಡಬಂದಿದೆ. ಮುಂಗುಸಿಯ ಪ್ರಾಣ ರಕ್ಷಣೆಗಾಗಿ ಚಾಲಕ ಹಠಾತ್ ಬ್ರೇಕ್ ಹಾಕುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಬಲವಾಗಿ ಅಪ್ಪಳಿಸಿ ಜಖಂಗೊಂಡಿದ್ದು ಚಾಲಕ ಇಸ್ಮಾಯಿಲ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯರು ವಿಟ್ಲದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!