March 20, 2026

ಕಾರಿನಲ್ಲಿ ಗಾಂಜಾ ಸಾಗಾಟ: ಮೂವರು ಆರೋಪಿಗಳ ಬಂಧನ

0
IMG-20230812-WA0044.jpg

ತೀರ್ಥಹಳ್ಳಿ: ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯ ಮಾಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಯೂನಸ್‌, ಲತೀಫ್‌, ಮನೋಜ್‌ ಎಂದು ಗುರುತಿಸಲಾಗಿದೆ.

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಗಾಂಜಾ ಸಾಗಿಸಲಾಗುತ್ತಿದ್ದು ತೀರ್ಥಹಳ್ಳಿಯಲ್ಲಿ ಗಾಂಜಾ ವಿಪರೀತ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು ಪೊಲೀಸರು ವಿಶೇಷ ತನಿಖೆ ನಡೆಸಲು ಮುಂದಾಗಿದ್ದಾರೆ.

ಡಿವೈಎಸ್‌ಪಿ ಗಜಾನನ ವಾಮನ ಸುತರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಮಾಳೂರು ಎಸ್‌ಐ ನವೀನ್‌ ಮಠಪತಿ, ಎಎಸ್‌ಐ ಶಿವಾನಂದ, ಧರಣಯ್ಯ ಸಿಬ್ಬಂದಿಗಳಾದ ಸುರಕ್ಷಿತ್‌, ಸಂತೋಷ್‌, ವಿವೇಕ್‌, ರಾಮಣ್ಣ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!