March 20, 2026

Online Game: 79 ಲಕ್ಷ ರೂ. ಕಳೆದುಕೊಂಡ ಯುವಕ

0
image_editor_output_image-657305561-1691827087866.jpg

ರಾಯಚೂರು: ಡಬಲ್ ಹಣದ ಆಸೆಗೆ ಆನ್‌ಲೈನ್ ಗೇಮ್ ಆ್ಯಪ್‌ಗಳಿಂದ ಯುವಕನೋರ್ವ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರಿನ ಲಿಂಗಸುಗೂರಿನ ಮುದಗಲ್ ನಿವಾಸಿ ಸಹದೇವಪ್ಪ ಹಣ ಕಳೆದುಕೊಂಡ ಯುವಕ. ಅತಿ ಆಸೆಗೆ ಸುಮಾರು 79 ಲಕ್ಷ ರೂ. ಕಳೆದುಕೊಂಡಿದ್ದು, 18 ಎಕರೆ ಜಮೀನು ಸಹ ಮಾರಾಟಮಾಡಿದ್ದಾನೆ.

ಕ್ರೈನೈನ್ ಡೇಸ್, ಅಪೆಕ್ಸ್ ನೈನ್, ರಾಧಾ ಎಕ್ಸಚೇಂಜ್, ಬೆಟ್ 365 ಆ್ಯಪ್‌ಗಳಲ್ಲಿ ಹಣ ಮಾಯಾವಾಗಿದೆ. ರಮ್ಮಿ, ಕ್ರಿಕೆಟ್, ಕ್ಯಾಸಿನೋ ಸೇರಿ ಇತರೆ ಆಟಗಳಿಗೆ ದುಡ್ಡು ಕಟ್ಟಿ ದಿವಾಳಿಯಾಗಿದ್ದು, ಆನ್‌ಲೈನ್ ಆ್ಯಪ್‌ಗಳು ಹಾಗೂ ಅವುಗಳ ಡೀಲರ್‌ಗಳಿಂದ ವಂಚನೆಗೆ ಒಳಗಾಗಿದ್ದಾನೆ. ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ, ಹನುಮನಗೌಡ ಎಂಬವರಿಂದ ವಂಚನೆಯಾಗಿದೆ ಎಂದು ಆರೋಪಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!