ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ: ಕಾಂಗ್ರೆಸ್-ಬಿಜೆಪಿ ಹೊಯ್ ಕೈ
ಮಂಗಳೂರು : ಮೂಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ನ ಮುಂದಿನ ಎರಡುವರೆ ವರ್ಷಗಳ ಅವಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದೆ.
ಎರಡು ಪಕ್ಷದ ಬೆಂಬಲಿಗರು ಹಳೆಯಂಗಡಿ ಗ್ರಾಮ ಪಂಚಾಯಿತಿನ ಹೊರಗಡೆ ಜಮಾಯಿಸಿ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿತ್ತು.
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ವಾರ್ಡ್ ಗಳಿದ್ದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು 11 ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು 11 ಮಂದಿ ಆಯ್ಕೆಯಾಗಿದ್ದರು.
ಮೊದಲ ಅವಧಿಯಲ್ಲಿ ಎರಡು ಪಕ್ಷಗಳ ಬೆಂಬಲಿತರ ಸಮಬಲ ದಿಂದ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಧಿಕಾರ ಪಟ್ಟ ಒಲಿದು ಬಂದಿತ್ತು.
ಬಿಜೆಪಿ ಬೆಂಬಲಿತರ ಎರಡೂವರೆ ವರ್ಷಗಳ ಅಧಿಕಾರದ ಬಳಿಕ ಈ ಬಾರಿ ಬದಲಾದ ವಿದ್ಯಮಾನಗಳಲ್ಲಿ ಬಿಜೆಪಿ ಬೆಂಬಲಿತ ಓರ್ವ ಸದಸ್ಯೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಜೊತೆ ಗುರುತಿಸಿಕೊಂಡಿದ್ದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯನೊಬ್ಬರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು.
ಬದಲಾದ ವಿದ್ಯಾಮಾನದಲ್ಲಿಯೂ ಸಮಬಲವಾಗಿದ್ದು ಮಾತ್ರವಲ್ಲದೆ, ಕಾಂಗ್ರೇಸ್ ಬೆಂಬಲಿತ ಮಹಿಳಾ ಸದಸ್ಯರೊಬ್ಬರು ಭ್ರಷ್ಟಾಚಾರ ಆರೋಪದ ಕಾರಣ ಅವರ ಸದಸ್ಯ ರದ್ದಾಗಿತ್ತು,
ಕೋರ್ಟ್ ತೀರ್ಪಿನ ಪ್ರಕಾರ ಆ ಮಹಿಳೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರ ವಾದವಾದವಾದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂಬುದು ಕಾಂಗ್ರೇಸ್ ಕಾರ್ಯಕರ್ತರ ವಾದವಾಗಿತ್ತು.




