March 23, 2026

ಮೋದಿ ಹೇಳಿದ್ದನ್ನು ಕೇಳಬೇಕು ಎನ್ನಲು ಅವರೇನು ದೇವರಲ್ಲ: ನಟ ಪ್ರಕಾಶ್ ರಾಜ್ ವಾಗ್ದಾಳಿ

0
IMG-20230808-WA0073.jpg

ಶಿವಮೊಗ್ಗ: ಕರ್ನಾಟಕದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರದ್ದು ರಾಜಕೀಯ ಹೇಳಿಕೆಯಷ್ಟೆ. ಅವರು ಹೇಳಿದ್ದನ್ನು ಕೇಳಬೇಕು ಎನ್ನಲು ಅವರೇನು ದೇವರಲ್ಲ ಎಂದು ಬಹುಭಾಷ ನಟ,ಚಿಂತಕ ಪ್ರಕಾಶ್ ರಾಜ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭಾಗ್ಯಗಳಾಗಿವೆ. ಮೋದಿ ಅವರು ತಂದ ಯೋಜನೆಗಳೆಲ್ಲಾ ಏನಾಗಿವೆ ಎಂಬುದನ್ನು ಮೊದಲು ಜನರಿಗೆ ತಿಳಿಸಲಿ ಎಂದರು.

ಇನ್ನು ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸಬಲವಾಗುವುದಲ್ಲದೆ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಯಾಗುತ್ತದೆ ಎನ್ನುವ ನರೇಂದ್ರ ಮೋದಿ ಅವರು ತಂದ ಯೋಜನೆಗಳಿಂದ ದೇಶ ಏನಾಗಿದೆ ಎಂಬುದಕ್ಕೆ ಉತ್ತರ ಕೊಡಲಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!