March 23, 2026

ಮಂಗಳೂರಿನಿಂದ ಹೊರಟಿದ್ದ KSRTC ಬಸ್ ಪಲ್ಟಿ: ಗಾಯಗೊಂಡ ಪ್ರಯಾಣಿಕರು ಆಸ್ಪತ್ರೆಗೆ ದಾಖಲು

0
image_editor_output_image-488896668-1691217403426.jpg

ಶಿರಸಿ: ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆ ಪಕ್ಕದ ಗದ್ದೆಗೆ ಉರುಳಿದ ಘಟನೆ ತಾಲೂಕಿನ ಹನುಮಂತಿ ಬಳಿ ನಡೆದಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ಗದ್ದೆಗೆ ಉರುಳಿ ಬಿದ್ದ ಪರಿಣಾಮ ಬಸ್ ಚಾಲಕ ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಘಟನೆ ಮಧ್ಯರಾತ್ರಿ ಸುಮಾರು ಮೂರು ಗಂಟೆ ಸಮಯಕ್ಕೆ ಸಂಭವಿಸಿದೆ ಎನ್ನಲಾಗಿದೆ.

ಮಂಗಳೂರಿನಿಂದ ಕುಷ್ಟಗಿಗೆ ಹೊರಟಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಗಾಯಗಳುಗಳನ್ನು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!