ವಿಧಾನ ಪರಿಷತ್ ಚುನಾವಣೆ:
ವಿಟ್ಲದಲ್ಲಿ ಪೂರ್ವಭಾವಿ ಸಭೆ
ವಿಟ್ಲ: ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಮೂಲಕ ಕಾಂಗ್ರೆಸ್ ನ ವೈಭವದ ದಿನವನ್ನು ಮತ್ತೆ ಕಾಣಬೇಕು. ಭೂ ಮಸೂದೆಗಾಗಿ ಹಲವು ತ್ಯಾಗ ಮಾಡಿದ ಕಾಂಗ್ರೆಸ್ ಅಕ್ರಮ ಸಕ್ರಮದ ಮೂಲಕ ಲಕ್ಷಾಂತರ ಮಂದಿಗೆ ಪಟ್ಟೆ ಕೊಡುವ ಕಾರ್ಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಹೇಳಿದರು.
ಅವರು ಬೊಬ್ಬೆಕೇರಿ ಸಭಾಂಗಣದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮಾತನಾಡಿ ಅಧಿಕಾರಕ್ಕಾಗಿ ರಾಜಕಾರಣವನ್ನು ಯಾವತ್ತೂ ಮಾಡಿಲ್ಲ. ಮಾನಸಿಕವಾಗಿ ಸಿದ್ದವಾದಾಗ ಚುನಾವಣೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಮತವನ್ನು ಖರೀದಿ ಮಾಡುವ ಹೀನ ಮಟ್ಟಕ್ಕೆ ಇಳಯಬಾರದು. ಹತ್ತು ಜನರಿಗೆ ಬೇಕಾದ ಕೆಲಸ ಮಾಡಿದಾಗ ಮಾತ್ರ ಜನರು ನೆನಪಿಡಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಡಾ. ರಘು, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ನವೀನ್ ಭಂಡಾರಿ, ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂಥಬೆಟ್ಟು, ಉಮಾನಾಥ ಶೆಟ್ಟಿ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್ ಉಪಸ್ಥಿತರಿದ್ದರು.
ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ. ಬಿ. ಸ್ವಾಗತಿಸಿದರು. ಕೆ. ಪಿ. ಸಿ. ಸಿ. ಕಾರ್ಯದರ್ಶಿ ಎಂ. ಎಸ್. ಮಹಮ್ಮದ್ ವಂದಿಸಿದರು. ವಕ್ತಾರ ರಮಾನಾಥ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.