March 23, 2026

ಮಣಿಪಾಲ: ರೀಲ್ಸ್ ಗಾಗಿ ಸ್ಕೂಟಿ ಸ್ಟಂಟ್: ವೀಡಿಯೊ ವೈರಲ್ ಆದ ಬೆನ್ನಲ್ಲೇ FIR ದಾಖಲು

0
image_editor_output_image-1579470996-1691051658568.jpg

ಉಡುಪಿ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಯುವಕನೋರ್ವ ಸ್ಕೂಟಿಯನ್ನು ಯದ್ವಾತದ್ವಾ ಓಡಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯುವಕನನ್ನು ಪರ್ಕಳ ನಿವಾಸಿ ಅಬೂಬಕ್ಕರ್ ಪುತ್ರ ಆಶಿಕ್ ಎಂದು ಗುರುತಿಸಲಾಗಿದೆ. ಯುವಕನ ಹುಚ್ಚಾಟದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಪರೀತವಾದ ಆಕ್ರೋಶ ವ್ಯಕ್ತವಾಗಿತ್ತು.

ಉಡುಪಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಇರುವ ಯುವಕ ತನ್ನ ಸ್ಕೂಟಿಯನ್ನು ಅಡ್ಡಾದಿಡ್ಡಿಯಾಗಿ ಪ್ರಾಣಕ್ಕೆ ಭೀತಿ ಉಂಟುಮಾಡುವ ರೀತಿಯಲ್ಲಿ ಅಪಾಯಕಾರಿಯಾಗಿ ಚಲಿಸುತ್ತಿದ್ದ.

ಇದನ್ನು ಬಳಿಕ ಆತನೇ ಅಪ್ಲೋಡ್ ಮಾಡಿದ್ದ. ಈತನ ಸ್ಟಂಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಣಿಪಾಲ ಪೊಲೀಸರ ಮೂಲಕ ಯುವಕನ ಗುರುತನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಯುವಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!