ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ಇದರ ವಿಸ್ತೃತ ಕೊಠಡಿ ಉದ್ಘಾಟನೆ
ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ತರಗತಿಯ ವಿಸ್ತೃತ ಕೊಠಡಿಯನ್ನು ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್ ಉದ್ಘಾಟಿಸಿದರು.
ಅರಬಿಕ್ ವಿಭಾಗದ ಮುಖ್ಯೋಪಾಧ್ಯಾಯ ಉಮರ್ ಸಅದಿ ದುವಾ ನೆರವೇರಿಸಿದರು.ಸಹ ಮುಖ್ಯೋಪಾಧ್ಯಾಯ ಅಬ್ದುಲ್ ಕಾದರ್ ದಾರಿಮಿ ಶುಭ ಹಾರೈಸಿದರು.
ಶಾಲಾ ಸಮಿತಿ ಅಧ್ಯಕ್ಷ ಝುಬೈರ್ ಮಾಸ್ಟರ್, ಉಪಾಧ್ಯಕ್ಷ ವಿ.ಕೆ.ಎಂ ಅಶ್ರಫ್, ಲೆಕ್ಕ ಪರಿಶೋಧಕ ಇಕ್ಬಾಲ್,ಮೇಲ್ವಿಚಾರಕ ಗಫೂರ್,ಟ್ರಸ್ಟಿ ಅಝೀಝ್ ಸನ, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು,ಮಸೀದಿಯ ಕಾರ್ಯದರ್ಶಿ ಹಮೀದ್ ಬದ್ರಿಯಾ ಮುಂತಾದವರು ಉಪಸ್ಥಿತರಿದ್ದರು,.
ಶಾಲೆಯ ಪ್ರಧಾನ ಕಾರ್ಯದರ್ಶಿ ನೋಟರಿ ನ್ಯಾಯವಾದಿ ಅಬೂಬಕರ್ ಸ್ವಾಗತಿಸಿ,ವಂದಿಸಿದರು.





