February 4, 2026

ಕಾರ್ಕಳ: ವಿದ್ಯುತ್ ಶಾಟ್೯ ಸಕ್ಯೂ೯ಟ್ ಸಂಭವಿಸಿ ಬ್ಯಾಂಕ್ ಗೆ ಬೆಂಕಿ

0
image_editor_output_image2032554253-1691044221985.jpg

ಕಾರ್ಕಳ: ಬ್ಯಾಂಕ್‌ ಶಾಖೆಯ ಕಚೇರಿಯಲ್ಲಿ ವಿದ್ಯುತ್ ಶಾಟ್೯ ಸಕ್ಯೂ೯ಟ್ ಸಂಭವಿಸಿ ಕೆಲವು ಸಮಯ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಕಾರ್ಕಳ ಬಸ್ಸು ನಿಲ್ದಾಣ ಸಮೀಪದ ಕೆನರಾ ಬ್ಯಾಂಕ್ ನಲ್ಲಿ ಆ. 3ರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಯಾವುದೇ ಅಗತ್ಯ ದಾಖಲೆಗಳು ಮತ್ತು ಸೊತ್ತುಗಳಿಗೆ ಹಾನಿಯಾಗಿಲ್ಲ. ಕೆಲವು ವಿದ್ಯುತ್ ಪರಿಕರಗಳು ಸುಟ್ಟು ಹಾನಿಯಾಗಿದೆ.

ಬ್ಯಾಂಕ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಕಚೇರಿಯ ಒಳಗೆ ಸುಟ್ಟ ವಾಸನೆ ಮತ್ತು ಹೊಗೆ ಕಾಣಿಸಿಕೊಂಡ ತತ್‌ಕ್ಷಣ ಅಲ್ಲಿದ್ದ ಸಿಬಂದಿ ದಾಖಲೆ ಪತ್ರಗಳನ್ನು ಮತ್ತು ಸೊತ್ತುಗಳನ್ನು ಬದಿಗೆ ಸರಿಸಿ ಹೊರಗೆ ಓಡಿ ಬಂದಿದ್ದಾರೆ.

ಬಳಿಕ ಸ್ಥಳಕ್ಕೆ ‌ದೌಡಾಯಿಸಿದ ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನ ಗೊಳಿಸಿದರು. ಸ್ಥಳದಲ್ಲಿ ‌ಗ್ರಾಹಕರು ‌ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!