ಬೆಳ್ತಂಗಡಿ: ಗಂಡಿಬಾಗಿಲು ಸಂತ ಥೋಮಸರ ಚರ್ಚ್ ನಲ್ಲಿ ಕಳವು
ಬೆಳ್ತಂಗಡಿ: ನೆರಿಯ ಗ್ರಾಮದ ಗಂಡಿಬಾಗಿಲು ಸಂತ ಥೋಮಸರ ದೇವಾಲಯ ಮತ್ತು ಸಂತ ಮರಿಯಮ್ಮ ಗ್ರೊಟ್ಟೋದ ಕಾಣಿಕೆ ಡಬ್ಬಿಯನ್ನು ಮಂಗಳವಾರ ರಾತ್ರಿ ಕಳ್ಳರು ಹಾನಿಯೆಸಗಿ ಕಳ್ಳತನಗೈದಿದ್ದಾರೆ.
ಬುಧವಾರ ಬೆಳಗ್ಗೆ ವಿಚಾರ ಬಹಿರಂಗವಾಗಿದೆ. ಚರ್ಚ್‌ನ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿಯಲಾಗಿದ್ದು ಅದರಲ್ಲಿದ್ದ ನಗದನ್ನು ಅಪಹರಿಸಲಾಗಿದೆ. ಕಾಣಿಕೆ ಡಬ್ಬಿಗೆ ಹಾನಿಯಾಗಿದೆ. ಇಲ್ಲಿಂದ ಅಣತಿ ದೂರದ ಆಲಂಗಾಯಿ ತಿರುವು ರಸ್ತೆ ಬಳಿ ಇರುವ ಸಂತ ಮರಿಯಮ್ಮರ ಗ್ರೋಟ್ಟೋ ಬಳಿಯ ಕಾಣಿಕೆ ಡಬ್ಬಿಯನ್ನೇ ಕಳ್ಳರು ಅಪಹರಿಸಿದ್ದಾರೆ.





