ಪತ್ನಿಯ ಶೀಲ ಶಂಕಿಸಿರುವ ಗುಪ್ತಾಂಗಕ್ಕೆ ವಿಕೆಟ್‍ನಿಂದ ಹಲ್ಲೆ ಮಾಡಿದ ಪತಿ: ಪತ್ನಿ ಗಂಭೀರ
ಚಿತ್ರದುರ್ಗ: ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಆಘಾತಕಾರಿ ಘನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ.
ಪತ್ನಿಯ ಶೀಲ ಶಂಕಿಸಿರುವ ಪತಿ ಆಕೆಯ ಗುಪ್ತಾಂಗಕ್ಕೆ ವಿಕೆಟ್‍ನಿಂದ ಹಲ್ಲೆ ನಡೆಸಿ ಅಮಾನವೀಯತೆ ತೋರಿದ್ದಾನೆ.
ಚಳ್ಳಕೆರೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿರುವ ಭಾಸ್ಕರ್ ಹಾಗೂ ರೇಖಾ ಎಂಬ ದಂಪತಿ ಪಾವಗಡ ರಸ್ತೆಯ ಮನೆಯಲ್ಲಿ ವಾಸವಾಗಿದ್ದಾರೆ.
ಭಾಸ್ಕರ್ ತನ್ನ ಪತ್ನಿ ರೇಖಾ ಶೀಲ ಶಂಕಿಸಿ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಕೋಪಗೊಂಡ ಭಾಸ್ಕರ್ ಪತ್ನಿಯ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿದ್ದಾನೆ.





