ಕಾಸರಗೋಡು : ನಿಷೇಧಿತ ತಂಬಾಕು ಉತ್ಪನ್ನ ಸಾಗಾಟ: ಆರೋಪಿಯ ಪೊಲೀಸರ ವಶಕ್ಕೆ
ಕಾಸರಗೋಡು: ಕರ್ನಾಟಕದಿಂದ ಕಾಸರಗೋಡಿಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು , ಓರ್ವನನ್ನು ಬಂಧಿಸಿದ್ದಾರೆ.
ಮಧೂರು ಉಳಿಯತ್ತಡ್ಕದ ಹಾಶಿಕುದ್ದಿನ್ (೩೦) ಬಂಧಿತರು. ಶನಿವಾರ ಬೆಳಿಗ್ಗೆ ವಾಹನ ತಪಾಸಣೆ ನಡೆಸಿದಾಗ ಟೊಯೋಟಾ ಕಾರಿನಲ್ಲಿ ಅಕ್ರಮ ಸಾಗಾಟ ಪತ್ತೆಯಾಗಿದೆ.
ಸುಮಾರು ಮೂರು ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.





