September 19, 2024

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ: ಇಬ್ಬರು ಪೊಲೀಸರ ವಶಕ್ಕೆ

0

ಮಂಗಳೂರು: ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಹಳೆಯ ಸಾರ್ವಜನಿಕ ಶೌಚಾಲಯದ ಬಳಿ ಸ್ಕೂಟರ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಬ್ದುಲ್‌ ರಹೀಂ ಮತ್ತು ಮೊಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಅಂದಾಜು ರೂ. 1,67,000 ಮೌಲ್ಯದ ಒಟ್ಟು 3 ಕೆಜಿ 378 ಗ್ರಾಂ ತೂಕದ ಗಾಂಜಾ, ತೂಕಮಾಪನ, ನಗದು ಹಣ 4,940 ಹಾಗೂ ರೂ. 50,000 ಮೌಲ್ಯದ ಆಕ್ಟಿವ ಹೋಂಡಾ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆಯನ್ನು ಪೊಲೀಸ್‌ ಆಯುಕ್ತರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರು(ಕಾ.ಸು) ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರು (ಅ. ಸ) ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ ಮಂಗಳೂರು ನಗರ ರವರ ಮಾರ್ಗದರ್ಶನಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ರವರು ಸಿಬ್ಬಂದಿಗಳಾದ ಎಎಸ್‌ಐ ದಾಮೋದರ, ಹೆಚ್ ಸಿ 929 ಮದನ್, ಹೆಚ್ ಸಿ 663 ಸತೀಶ್, ಪಿಸಿ 3238 ಸಂಪತ್, ಪಿಸಿ 311 ಸುನಿಲ್ ಮತ್ತು ಪಿಸಿ 3264 ಗುರು ಬಿ ಟಿ ರವರ ಜೊತೆ ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!