March 13, 2026

ಮಂಗಳೂರು | ಡಾಬರ್ ಮನ್ ನಾಯಿಗೆ ವಿಷ ಹಾಕಿ ಕೊಲೆ: FIR ದಾಖಲು

0
image_editor_output_image2123369347-1690437526875.jpg

ಮಂಗಳೂರು: ಪೂರ್ವದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್ ಸಾಕು ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಕಾಪಿಕಾಡ್ 4 ನೇ ಕ್ರಾಸ್‌ನಲ್ಲಿದ್ದ ವ್ಯಕ್ತಿಯೊಬ್ಬರ 4 1/2 ವರ್ಷದ ಡಾಬರ್ ಮನ್ ನಾಯಿ ಸಾಕುತ್ತಿದ್ದರು. ಜು.24 ರಂದು ನೆರೆಮನೆಯ ಭೀಮಯ್ಯ ಎಂಬುವವರು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಪದಾರ್ಥವನ್ನು ಹಾಕಿದ್ದಾರೆ.

ಪರಿಣಾಮ ಜು.25 ರಂದು ನಾಯಿ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದೆ. ಈ ಹಿನ್ನೆಲೆ ನಾಯಿ ಸಾವಿಗೆ ಕಾರಣನಾದ ಬೀಮಯ್ಯ ಎಂಬುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾಕು ನಾಯಿಯ ಯಜಮಾನ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!