March 13, 2026

ಮಂಗಳೂರು: 600ರ ಗಡಿ ದಾಟಿದ ಕಾಳುಮೆಣಸು: ಮತ್ತಷ್ಟು ಏರಿಕೆ ಆಗುವ ಸಾಧ್ಯತೆ

0
lifestyle_1100x.jpg


 
ಮಂಗಳೂರು: ಕಾಳುಮೆಣಸಿನ ಧಾರಣೆ ಏರಿಕೆ ಮಾರುಕಟ್ಟೆಯಲ್ಲಿ ಮುಂದುವರಿದಿದ್ದು ಕೆಲ ದಿನಗಳ ಹಿಂದೆ ಕೆ.ಜಿ.ಗೆ 480ರಿಂದ 500 ರೂ. ಇದ್ದ ಕಾಳುಮೆಣಸು ದರ, ದಿಢೀರ್ ಆಗಿ ಈಗ 600ರ ಗಡಿ ದಾಟಿದೆ.

ಕಾಳುಮೆಣಸಿನ ಧಾರಣೆ ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಸೋಮವಾರ ಕೆ.ಜಿ.ಯೊಂದಕ್ಕೆ ಗರಿಷ್ಠ 570ರೂ. ಧಾರಣೆ ದೊರೆತಿದೆ.

ಕ್ಯಾಂಪ್ಕೋದಲ್ಲಿ 550 ರೂ ತನಕ ಧಾರಣೆ ಇತ್ತು. ಕಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ 40 ರಿಂದ 50 ರೂ ತನಕ ಧಾರಣೆ ಹೆಚ್ಚಿತ್ತು.

ಕಲೆದ ಮೂರು ವರ್ಷದಿಂದ 500ರ ಗಡಿ ದಾಟದೆ ಇದ್ದ ಕರಿಮೆಣಸಿನ ಧಾರಣೆ 2023ರ ಜುಲೈನಲ್ಲಿ 600ರ ಗಡಿ ದಾಟಿದ್ದು, ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!