March 13, 2026

ಜಲಾಶಯದ ಎರಡು ಕಡೆ ಭೂ ಕುಸಿತ: ರೈಲು ಸಂಚಾರ ಸ್ಥಗಿತ

0
image_editor_output_image1453319129-1690354473480.jpg

ಬೆಳಗಾವಿ: ವಿಶ್ವಪ್ರಸಿದ್ಧ ಪ್ರವಾಸಿ ತಾಣ, ಗೋವಾ ರಾಜ್ಯದ ದೂಧ್ ಸಾಗರ ಜಲಾಶಯದ ಬಳಿ ಎರಡು ಕಡೆ ಭೂ ಕುಸಿತವಾಗಿದೆ. ಮುನ್ನೆಚ್ಚರಿಕೆವಹಿಸಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ.

ದೂಧ್ ಸಾಗರ ಜಲಪಾತದ ಸ್ವಲ್ಪ ದೂರದಲ್ಲಿ ರೈಲು ಹಳಿಗಳ ಬಳಿ ಭೂ ಕುಸಿತವಾಗಿದೆ. ಇನ್ನೊಂದೆಡೆ ಜಲಪಾತದತ್ತ ಸಾಗುವ ರೈಲು ಹಳಿಗಳ ಸುರಂಗದಲ್ಲಿ ಗುಡ್ಡದ ಭಾಗ ಕುಸಿದು ಹಳಿಗಳ ಮೇಲೆ ಬಿದ್ದಿದೆ.

ಎಚ್ಚೆತ್ತುಕೊಂಡ ಅಧಿಕಾರಿಗಳು ಕೆಲ ರೈಲುಗಳ ಮಾರ್ಗಗಳನ್ನು ಬದಲಾಯಿಸಿದ್ದು, ಕೆಲವನ್ನು ರದ್ದುಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!