ಮಂಗಳೂರು: ಹಂಪನಕಟ್ಟೆಯ ಲೈಫ್ ಇನ್ಶೂರೆನ್ಸ್ ಕಚೇರಿಯಲ್ಲಿ ಬೆಂಕಿ ಅವಘಡ
ಮಂಗಳೂರು : ಮಂಗಳೂರಿನ ಹಂಪನಕಟ್ಟೆಯ ಲೈಟ್ ಹೌಸ್ ಹಿಲ್ ರಸ್ತೆಯ ಮ್ಯಾಕ್ಸಿಮಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಿಲಯನ್ಸ್ ನಿಪ್ಪೋನ್ ಲೈಫ್ ಇನ್ಶೂರೆನ್ಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಬೆಂಕಿ ದುರಂತ ಸಂಭವಿಸಿದೆ.
ಬೆಂಕಿ ದುರಂತದಲ್ಲಿ ಕಚೇರಿಯ ಎಸಿ, ಕಂಪ್ಯೂಟರ್ ಮತ್ತು ಕೆಲವು ಕಡತಗಳು ಸುಟ್ಟು ನಾಶವಾಗಿವೆ.
ನಷ್ಟದ ಪ್ರಮಾಣವನ್ನು ಅಂದಾಜಿಸಿಲ್ಲ. ಕಟ್ಟಡದ 3 ನೇ ಮಹಡಿಯ ಕೊಠಡಿಯಲ್ಲಿ ಈ ಕಚೇರಿ ಇದ್ದು, ಬೆಳಗ್ಗೆ ಸುಮಾರು 6 . 30 ರ ವೇಳೆಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪಾಂಡೇಶ್ವರದ ಅಗ್ನಿ ಶಾಮಕ ಠಾಣೆಯ ಆಧಿಕಾರಿಗಳು ಮತ್ತು ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು.




