ಕೇರಳದಲ್ಲಿ ನ್ಯೂರೊ ವೈರಸ್ ಪತ್ತೆ ಹಿನ್ನೆಲೆ:
ದ.ಕ ಜಿಲ್ಲೆಯಲ್ಲಿ ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ
ಮಂಗಳೂರು: ಕೇರಳದಲ್ಲಿ ನ್ಯೂರೊ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಭೇದಿ, ಹೊಟ್ಟೆನೋವು, ವಾಂತಿ, ಜ್ವರ ನ್ಯೂರೊ ವೈರಸ್ ಸೋಂಕಿನ ಲಕ್ಷಣವಾಗಿದ್ದು, ಈ ಲಕ್ಷಣಗಳು ಗುಂಪಾಗಿ ಕಂಡು ಬಂದರೆ ತಕ್ಷಣ ಮಾಹಿತಿ ರವಾನಿಸಬೇಕೆಂದು ಜಿಲ್ಲೆಯ ಎಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ರವಾನಿಸಲಾಗಿದೆ.
ಇನ್ನು ಸರಕಾರದ ಸೂಚನೆಯಂತೆ ನ್ಯೂರೊ ಸೋಂಕು ಪ್ರಕರಣ ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅವರು ಪ್ರತೀ ದಿನವೂ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಕಳುಹಿಸಿ ಕೊಡಲು ಸೂಚಿಸಲಾಗಿದೆ.