March 13, 2026

ಮಂಗಳೂರು| ದೇವಸ್ಥಾನ, ಜಾತ್ರೆಗಳಲ್ಲಿ ಅಮಲು ಮಿಶ್ರಿತ ಚಾಕೊಲೇಟ್ ಮಾರಾಟ: ಕೊನೆಗೂ ತಪ್ಪೊಪ್ಪಿಕೊಂಡ ಮನೋಹರ ಶೇಟ್

0
image_editor_output_image660558067-1690196704729.jpg

ಮಂಗಳೂರು: ದೇವಸ್ಥಾನ, ಜಾತ್ರೆ ಸಂದರ್ಭದಲ್ಲಿ ಅಮಲು ಮಿಶ್ರಿತ ಬಾಂಗ್‌ ತೆಗೆದುಕೊಳ್ಳುವ ಕ್ರಮ ಇದೆ ಎಂಬ ಹೇಳಿಕೆ ನೀಡಿದ್ದ ಮಂಗಳೂರು ರಥಬೀದಿ ವ್ಯಾಪಾರಿ ಮನೋಹರ ಶೇಟ್ ಇದೀಗ ತಪ್ಪೊಪ್ಪಿಗೆಯ ಹೇಳಿಕೆ ನೀಡಿದ್ದು ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಮನೋಹರ್ ಶೇಟ್ , ಜುಲೈ 18ರಂದು ಮಂಗಳೂರಿನ ರಥಬೀದಿಯಲ್ಲಿ ಕಳೆದ ಹಲವು ವರ್ಷಗಳಿಂದ ಬಾಂಗ್ ಎನ್ನುವ ಮಾದಕ ದ್ರವ್ಯ ಮಾರಾಟ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಅಮಲುಮಿಶ್ರಿತ ಚಾಕೋಲೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಬಾಂಗ್‌ ಎನ್ನುವುದು ಜಾತ್ರೆಯ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಾರೆ ಎಂದು ಅಸಂಬಧ್ಧ ಹೇಳಿಕೆ ನೀಡಿದ್ದೆ. ದೇವಸ್ಥಾನದ ರಥೋತ್ಸವ, ಓಕುಳಿ ಸಮಯದಲ್ಲಿ ಸೇವಿಸುತ್ತಾರೆ ಎಂದು ಹೇಳಿದ್ದರು. ಹಿಂದು ಸನಾತನದಲ್ಲಿ ಅಂತಹ ಸಂಪ್ರದಾಯ ಇಲ್ಲ. ಅಲ್ಲದೆ ಯೋಗ ಗುರು ಬಾಬಾ ರಾಮ್‌ ದೇವ್ ಅವರ ಬಗ್ಗೆಯೂ ಹಗುರವಾದ ಮಾತು ಹೇಳಿದ್ದೆ ನನಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಆಗಿದ್ದು, ಮಾನಸಿಕವಾಗಿ ಅವರು ಅನಾರೋಗ್ಯಕ್ಕೆ ಒಳಗಾಗಿದೆ ಆದ್ದರಿಂದ, ತಿಳಿಯದೇ ಏನೇನೋ ಹೇಳಿಕೆ ಕೊಟ್ಟಿದೆ. ಹೀಗಾಗಿ ತಾನು ನೀಡಿದ ಹೇಳಿಕೆಯನ್ನು ಸಮಾಜದವರು, ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಗಂಭೀರವಾಗಿ ಪರಿಗಣಿಸದೇ ಕ್ಷಮೆ ನೀಡಬೇಕೆಂದು ಮನೋಹರ್‌ ಶೇಟ್ ಹೇಳಿದರು.

ಈ ಸಂದರ್ಭ ಮನೋಹರ ಶೇಟ್ ಅವರ ಸಹೋದರ ಪ್ರಕಾಶ್ ಡಿ ಶೇಟ್‌, ಮನೋಜ್‌ ಶ್ರೀನಿವಾಸ ನಾಯಕ್‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!