March 13, 2026

ಬಂಟ್ವಾಳ ತಾಲೂಕಿನ ಆಯ್ದ ಕೆಲವು ಶಾಲೆಗಳಿಗೆ ರಜೆ ಘೋಷಣೆ

0
image_editor_output_image-319755721-1690166557075

ಬಂಟ್ವಾಳ: ಕಳೆದೆರಡು ದಿನಗಳಿಂದ ರಾಜ್ಯದಂತ ಹೆಚ್ಚಿನ ಮಳೆಯಾಗುತ್ತಿದ್ಸು, ಬಂಟ್ವಾಳ ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುವ ನದಿ ತೀರದ ಆಯ್ದ ಕೆಲವು ಶಾಲೆಗಳಿಗೆ ರಜೆ ಸಾರಲಾಗಿದೆ ಎಂದು ತಹಶಿಲ್ದಾರ್ ಅವರ ಗ್ರೂಪ್ ಒಂದರಲ್ಲಿ ಮೆಸೇಜ್ ಹಾಕಿದ್ದಾರೆ.
ಯಾವ ಶಾಲೆಗಳಿಗೆ ರಜೆ ಇಲ್ಲಿದೆ ನೋಡಿ

ಹಯತುಲ್ ಶಾಲೆ ಗೂಡಿನ ಬಳಿ, ಕಿರಿಯ ಪ್ರಾಥಮಿಕ ಶಾಲೆ ವಳವೂರು, ಶಾರದ ಮತ್ತು ಎಸ್ ಎಲ್ ಎನ್ ಪಿ ಪಾಣೆಮಂಗಳೂರು ,ಎಲ್ ಸಿ ಆರ್ ಕಕ್ಕೆ ಪದವು, ಕೆಪಿಎಸ್ ಮೊಂಟೆಪದವು, ಕುನಿಲ್ ಶಾಲೆ ತುಂಬೆ. ಬಿ ಎ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಪೆರ್ಲಬಿಯಪಾದ ಶಾಲೆ, ಸರಪಾಡಿ ಪ್ರೈಮರಿ ಶಾಲೆ, ಹೆಗಡೆ ಶಾಲೆ, ಪೂಪಾಡಿ ಕಟ್ಟಿ ಶಾಲೆ, ದಡ್ಡಲಕಾಡು ಶಾಲೆ, ಎರ್ಮಲಪದವು,
ಮಜ್ಲೀಸ್ ಶಾಲೆಗಳಿಗೆ ರಜೆ ಸಾರಲು ಸೂಚನೆ ನೀಡಿದ್ದೇವೆ ಎಂದು ತಹಶಿಲ್ದಾರ್ ಅವರ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದಾರೆ.

ಮೇಲಿನ ಎಲ್ಲಾ ಶಾಲೆಗಳಿಗೆ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ ಇನ್ನೂಳಿದ ಶಾಲೆ ಪ್ರತಿ ದಿನದಂತೆ ಶಾಲೆ ಇರಲಿದೆ ಎಂಬುದನ್ನು ಸೂಚಿಸಿದ್ದಾರೆ.

ರಾತ್ರಿ ಗೊಂದಲ
ರಜೆಯ ಬಗ್ಗೆ ರಾತ್ರಿ ವೇಳೆ ಗೊಂದಲ ಮೆಸೇಜ್ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಪೋನ್ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ. ನದಿ ತೀರದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂಬ ಮೆಸೇಜ್ ಗಳು ರಾತ್ರಿಯೇ ಹರಿದಾಡುತ್ತಿದ್ದು, ಆದರೆ ಅಧಿಕಾರಿಗಳು ಸ್ಪಷ್ಟವಾಗಿ ಮಾಧ್ಯಮ ಗಳಿಗೆ ತಿಳಿಸದೆ ಪೋಷಕರು ಮಾಧ್ಯಮದವರ ಜೊತೆ ಸಂಪರ್ಕ ಮಾಡಿ ಕೇಳುವ ಪ್ರಮೇಯ ಒದಗಿಬಂದಿತ್ತು.
24 ಗಂಟೆಯೂ ಪಾಕೃತಿಕ ವಿಕೋಪ ದ ಕೆಲಸಕ್ಕಾಗಿ ಕೇಂದ್ರ ಸ್ಥಾನದಲ್ಲಿರಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಅಧಿಕಾರಿಗಳು ಮಾಹಿತಿ ಗಾಗಿ‌ಪೋನ್ ಮಾಡಿದರೆ ಪೋನ್ ರಿಸೀವ್ ಮಾಡುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಇಂತಹ ಅಧಿಕಾರಿಗಳ ಮೇಲೆ ಸೂಕ್ತವಾದ ಕ್ರಮವನ್ನು ಮೇಲಾಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ

Leave a Reply

Your email address will not be published. Required fields are marked *

error: Content is protected !!