ಹೊಂಡಕ್ಕೆ ಬಸ್ ಉರುಳಿ ಬಿದ್ದ ಬಸ್: 17 ಮಂದಿ ಮೃತ್ಯು
ಢಾಕಾ: ಹೊಂಡಕ್ಕೆ ಬಸ್ ಉರುಳಿ ಬಿದ್ದು ಕನಿಷ್ಠ 17 ಮಂದಿ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಛತ್ರಕಾಂಡ ಪ್ರದೇಶದ ಜಲಕತಿ ಸದರ್ ಉಪಜಿಲಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.
52 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಬಸ್ಸಿನಲ್ಲಿ 60 ಕ್ಕೂ ಹೆಚ್ಚಿನ ಮಂದಿಯನ್ನು ಹೊತ್ತುಕೊಂಡು ಹೋಗಲಾಗುತ್ತಿತ್ತು.
ಬೆಳಗ್ಗೆ 9:00 ಗಂಟೆ ಸುಮಾರಿಗೆ ಪಿರೋಜ್‌ಪುರದ ಭಂಡಾರಿಯಾದಿಂದ ಹೊರಟು 10:00 ಗಂಟೆ ಸುಮಾರಿಗೆ ಬಾರಿಶಾಲ್-ಖುಲ್ನಾ ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ ಛತ್ರಕಾಂಡದಲ್ಲಿ ರಸ್ತೆ ಬದಿಯ ನೀರಿನ ಹೊಂಡಕ್ಕೆ ಬಸ್ ಉರುಳಿ ಬಿದ್ದಿದೆ.
ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. 35 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ಚಾಲಕನ ನಿರ್ಲಕ್ಯ ಹಾಗೂ ಬಸ್ಸಿನಲ್ಲಿ ಹೆಚ್ಚಿನ ಜನರನ್ನು ಹಾಕಿದ್ದರಿಂದಲೇ ಈ ಘಟನೆ ಸಂಭವಿಸಿದೆ ಎಂದು ಬದುಕುಳಿದವರು ಹೇಳಿದ್ದಾರೆ.




