ಬೆಂಗಳೂರಿನಲ್ಲಿ ಕಳವಾಗಿದ್ದ ಬೈಕ್ ಫರಂಗಿಪೇಟೆಯಲ್ಲಿ ಪತ್ತೆ:
ಬಂಟ್ವಾಳ: ಕಳವು ಮಾಡಲಾಗಿದ್ದ ಬೈಕ್ ಪೊಲೀಸರ ವಾಹನ ತಪಾಸಣೆ ವೇಳೆ ಮೆಲ್ಕಾರ್ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಬಳಿ ಪತ್ತೆಯಾಗಿದೆ.
ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ನೇತೃತ್ವದ ಪೋಲೀಸ್ ತಂಡ ಫರಂಗಿಪೇಟೆ ಎಂಬಲ್ಲಿ ಸಂಜೆ ವೇಳೆ ವಾಹನ ತಪಾಸಣಾ ನಡೆಸುತ್ತಿರುವ ವೇಳೆ ಬೆಳಕಿಗೆ ಬಂದಿದೆ.
ಡ್ಯೂಕ್ ಬೈಕಿನಲ್ಲಿ ಬರುತ್ತಿದ್ದ ಸವಾರನನ್ನು ತಪಾಸಣೆ ಮಾಡಲು ನಿಲ್ಲಿಸಲು ಸೂಚಿಸಿದಾಗ, ಆತ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಬೈಕ್ ನ್ನು ವಶಪಡಿಸಿಕೊಂಡ ಪೊಲೀಸರು ಬೈಕಿನ ಬಗ್ಗೆ ತಪಾಸಣೆ ನಡೆಸಿದಾಗ ಮೂಲ ವಾಹನ ಸಂಖ್ಯೆಯನ್ನು ಬದಲಾಯಿಸಲಾಗಿತ್ತು.
ಒರಿಜಿನಲ್ ವಾಹನ ಸಂಖ್ಯೆ ಬೇರೆಯಾಗಿತ್ತು. ವಾಹನದ ಇಂಜಿನ್ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಇದು ಕಳವಾದ ಬೈಕ್ ಎಂಬುದು ಖಚಿತವಾಗಿದೆ.
2021 ರಲ್ಲಿ ಬೆಂಗಳೂರಿನಲ್ಲಿ ಈ ಬೈಕ್ ಕಳವಾಗಿರುವ ಮಾಹಿತಿ ಪಡೆದ ಪೋಲೀಸರು ಬೆಂಗಳೂರು ಪೊಲೀಸರಿಗೆ ಬೈಕ್ ನ್ನು ಹಸ್ತಾಂತರ ಮಾಡಲಿದ್ದಾರೆ.
ಡ್ಯೂಕ್ ಕಂಪೆನಿಗೆ ಸೇರಿದ ಬೈಕ್ ಇದಾಗಿದ್ದು, ಸದ್ಯ ಪೋಲೀಸರ ವಶದಲ್ಲಿದೆ.




