ಶಿವಮೊಗ್ಗ: ಮಾರಕಾಸ್ತ್ರಗಳಿಂದ ಹಲ್ಲೆಗೈದು ರೌಡಿಶೀಟರ್ ನ ಹತ್ಯೆ
ಶಿವಮೊಗ್ಗ: ವ್ಯಕ್ತಿಯೋರ್ವನನ್ನು ರಾತ್ರಿ ವೇಳೆ ಮನೆಯ ಮುಂದೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ಮಾಡಿರುವ ಘಟನೆ ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.
ಹತ್ಯೆಗೊಳಗಾದ ರೌಡಿಶೀಟರ್ ಮುಜಾಯಿದ್ದೀನ್ (32) ಎಂದು ಗುರುತಿಸಲಾಗಿದೆ.
ಮುಜಾಯಿದ್ದೀನ್ ಅವರು ರಾತ್ರಿ ವೇಳೆ ಮನೆಯ ಗೇಟ್ ಬಳಿ ನಿಂತಿದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಪರಿಣಾಮ ತಲೆಗೆ ತೀವ್ರವಾಗಿ ಮುಜಾಯಿದ್ದೀನ್ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾವತಿಯಲ್ಲಿ ಈ ಹಿಂದೆ ನಡೆದಿದ್ದ ಹಲವು ಅಪರಾಧ ಪ್ರಕರಣದಲ್ಲಿ ಮುಜಾಯಿದ್ದೀನ್ ಭಾಗಿಯಾಗಿದ್ದನು ಎನ್ನಲಾಗಿದೆ.




