ಬಿಜೆಪಿ ಮುಖಂಡನನ್ನು ಹತ್ಯೆಗೈದಿದ್ದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ
ಜೈಪುರ್: ಬಿಜೆಪಿ ನಾಯಕನನನ್ನು ಹತ್ಯೆಗೈದ ಆರೋಪಿ ಕುಲದೀಪ್ ಜಘೀನಾನನ್ನು ಬಸ್ಸಿನೊಳಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಬುಧವಾರ ನ್ಯಾಯಾಲಯದ ವಿಚಾರಣೆಗಾಗಿ ಬಸ್‍ನಲ್ಲಿ ಆರೋಪಿಯನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ರಾಜಸ್ಥಾನದ ಭರತ್‍ಪುರದ ಅಮೋಲಿ ಟೋಲ್ ಪ್ಲಾಜಾ ಬಳಿ ಕಾರು ಮತ್ತು ಎರಡು ಬೈಕ್‍ಗಳಲ್ಲಿ ಬಂದ 12 ಜನರ ಗುಂಪು ಕೊಲೆ ಆರೋಪಿಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಈ ವೇಳೆ ಜೊತೆಗಿದ್ದ ಇನ್ನೋರ್ವ ಆರೋಪಿಗೂ ಗುಂಡು ತಗುಲಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಗುಂಪು ಬಸ್‍ನ್ನು ತಡೆದಿದೆ. ಬಳಿಕ ಏಕಾಏಕಿ ಬಸ್‍ನೊಳಗೆ ನುಗ್ಗಿ ಪೊಲೀಸರ ಮೇಲೆ ಖಾರದ ಪುಡಿ ಎರಚಿದ್ದಾರೆ.
ಬಳಿಕ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಮೇಲೆ ಗುಂಡು ಹಾರಿಸಿದ್ದಾರೆ. ಬಸ್‍ನಲ್ಲಿ ಪ್ರಯಾಣಿಕರ ಭದ್ರತೆ ದೃಷ್ಟಿಯಿಂದ ಪೊಲೀಸ್ ತಂಡ ಗುಂಡು ಹಾರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ




