March 13, 2026

KSRTC ಬಸ್ ಢಿಕ್ಕಿ: ಬೈಕ್ ನಲ್ಲಿದ್ದ ವಿದ್ಯಾರ್ಥಿ ಮೃತ್ಯು, ಇನ್ನೋರ್ವ ಗಂಭೀರ

0
image_editor_output_image-2017799415-1689139557038.jpg

ಮಾಗಡಿ : ಪರೀಕ್ಷೆ ಬರೆಯಲು ತನ್ನ ಗೆಳೆಯನೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಾಗಡಿ ರಾಮನಗರ ಮುಖ್ಯ ರಸ್ತೆಯ ಜೋಡಗಟ್ಟೆ ಕಾಡಿನ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತ ವಿದ್ಯಾರ್ಥಿ ಮಾಗಡಿಗೆ ಇನ್ನೋರ್ವ ವಿದ್ಯಾರ್ಥಿಯ ಜೊತೆ ಬೈಕ್ ನಲ್ಲಿ ಐಟಿಐ ಪರೀಕ್ಷೆ ಬರೆಯಲು ಬರುತ್ತಿದ್ದ ಎನ್ನಲಾಗಿದೆ ಈ ವೇಳೆ ಎದುರಿನಿಂದ ಬಂದ ಸರಕಾರಿ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟಿದ್ದಾನೆ, ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಮಾಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!