March 13, 2026

ವಿಟ್ಲ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹನ ಸಮಾರಂಭ : ಸಾಧಕರಿಗೆ ಸನ್ಮಾನ

0
IMG-20230710-WA0007.jpg

ವಿಟ್ಲ: ವಿಟ್ಲ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹನ ಸಮಾರಂಭ ವಿಟ್ಲ ಬೊಬ್ಬೆಕೇರಿ ಗಜಾನನ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ರೋಟರಿ ಕ್ಲಬ್ ಜಿಲ್ಲಾ ಡಿಜಿಇ ವಿಕ್ರಮದತ್ತ ಅವರು ನೂತನ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ, ಕಾರ್ಯದರ್ಶಿ ಮೋಹನ ಎ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ನಡೆಸಿಕೊಟ್ಟರು. ವಿಟ್ಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸಲ್ವಿಸ್, ಗ್ರೇಸಿ ಗೋನ್ಸಲ್ವಿಸ್, ವಲಯ ಸೇನಾನಿ ಅಣ್ಣಪ್ಪ ಸಾಸ್ತಾನ, ನಿರ್ಗಮನ ಅಧ್ಯಕ್ಷ ಪ್ರಕಾಶ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ
ಯಾದವ ವಿಟ್ಲ, ಜಾನ್ ಸಿಲ್ವರಿಯನ್ ಲಸ್ರಾದೋ, ಚಂದ್ರಶೇಖರ ಕನ್ಯಾನ, ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶಾಮೀಕ್ ಜನಪ್ರಿಯ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಪಟು ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಿಶಾ ಬಿ, ಎಸ್ಸೆಎಸ್ಸೆಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಾನ್ವಿ ಕಜೆ, ಸಮರ್ ಖತೀಜ, ಸತ್ವಿಕ್ ಕೃಷ್ಣ, ಸಂಕೇಶ್ ಶೆಟ್ಟಿ, ಕೆ ಜೀವಿತಾ, ಹೊರೈಝನ್, ತೌಫಿಕಾ, ಕೆ ಮೋಕ್ಷಿತ್, ಆಯಿಷತ್ ಸಹಲಾ ಅವರನ್ನು ಗೌರವಿಸಲಾಯಿತು.
ಜಯರಾಮ ರೈ ಅವರ ನೇತೃತ್ವದಲ್ಲಿ
ಅಂಗನವಾಡಿ ಕೇಂದ್ರ ಅಡ್ಯನಡ್ಕ ನೀರಿನ ಟ್ಯಾಂಕ್ ಹಸ್ತಾಂತರ ಮಾಡಲಾಯಿತು.‌
ಧನಂಜಯ ಎನ್, ಸುರೇಶ್, ರಂಜಿತ್ ಶೆಟ್ಟಿ ಅವರು ನೂತನವಾಗಿ ಸೇರ್ಪಡೆಗೊಂಡರು.

ರಶೀದ್ ವಿಟ್ಲ, ಭಾಸ್ಕರ್ ಶೆಟ್ಟಿ, ಡಾ. ಚರಣ್ ಕಜೆ ನಿರೂಪಿಸಿದರು. ಡಾ.ವಿ.ಕೆ ಹೆಗ್ಡೆ, ಸೋಮಶೇಖರ ವಿವಿಧ ಜವಾಬ್ದಾರಿ ನಿಭಾಯಿಸಿದರು.

Leave a Reply

Your email address will not be published. Required fields are marked *

error: Content is protected !!