March 13, 2026

ಬಿ‌.ಸಿ.ರೋಡ್ ನಿಂದ ಉಪ್ಪಿನಂಗಡಿಗೆಗೆ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಬಲೆ, ಉಂಗುರ ಕಳೆದುಹೋಗಿದೆ

0
IMG-20230709-WA0079.jpg

*ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ಮನವಿ*

ಬಿ.ಸಿ.ರೋಡ್: ಜುಲೈ 9ರಂದು ಬಿ‌.ಸಿ.ರೋಡ್ ನಿಂದ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯ ಬುರ್ಖಾ ಕಿಸೆಯಲ್ಲಿದ್ದ ಚಿನ್ನದ ಬಲೆ, ಉಂಗುರ, ಆಧಾರ್ ಕಾರ್ಡ್ ಕಳೆದುಹೋದ ಘಟನೆ ನಡೆದಿದೆ.

ಪಾಣೆಮಂಗಳೂರಿನ‌ ಬಂಗ್ಲೆಗುಡ್ಡೆಯ ನಿವಾಸಿ ಮರಿಯಮ್ಮ (55) ಚಿನ್ನಾಭರಣವನ್ನು ಕಳೆದುಕೊಂಡ ಮಹಿಳೆ.

ಉಪ್ಪಿನಂಗಡಿಗೆ ಸರಕಾರಿ ಬಸ್ ನ 2ನೇ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಟಿಕೆಟ್ ಗಾಗಿ ಆಧಾರ್ ಕಾರ್ಡ್ ತೆಗೆಯಲು ಬುರ್ಖಾದ ಜೇಬಿಗೆ ಕೈ ಹಾಕಿದಾಗ ಚಿನ್ನಾಭರಣವನ್ನು ಸುತ್ತಿದ್ದ ಟವಲ್ ಹಾಗೂ ಆಧಾರ್ ಕಾರ್ಡ್ ಕೂಡಾ ಕಳೆದು ಹೋಗಿದೆ ಎಂದು ಮರಿಯಮ್ಮ ಅವರು ತಿಳಿಸಿದ್ದಾರೆ.

ಟವಲ್ ನಲ್ಲಿ 3 ಪವನ್ ನ ಒಂದು ಚಿನ್ನದ ಬಲೆ, ಒಂದು ಚಿನ್ನದ ಉಂಗರ ಸಹಿತ ಒನ್ ಗ್ರಾಂ ಬಂಗಾರಗಳಿದ್ದವು ಎಂದು ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಯಾರಿಗಾದರೂ ಸಿಕ್ಕಿದ್ದಲ್ಲಿ ಈ ನಂಬರ್ ಗೆ ಸಂಪರ್ಕಿಸುವಂತೆ 7899012635, 9731677107 ಅವರು ಮನವಿ ಮಾಡಿಕೊಂಡಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!