ಶಿರ್ವ: ಹಲವು ಅಂಗಡಿಗಳಲ್ಲಿ ಸರಣಿ ಕಳ್ಳತನ
ಶಿರ್ವ: ಕಟಪಾಡಿ ಪೊಲೀಸ್ ಹೊರ ಠಾಣೆ ಬಳಿ ಶಿರ್ವ ಸಂಪರ್ಕ ರಸ್ತೆಯ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.
ಮಾಡಿನ ಹಂಚು ತೆಗೆದು ಒಳ ಪ್ರವೇಶಿದ ಕಳ್ಳರು ಬೇಕರಿ, ಮೆಡಿಕಲ್ ಶಾಪ್, ಫರ್ನಿಚರ್ ಅಂಗಡಿ, ದಿನಸಿ ಅಂಗಡಿ ಸಹಿತ ಇತರ ಅಂಗಡಿಗಳಲ್ಲೂ ಕಳವು ನಡೆಸಲಾಗಿದೆ. ಕೆಲವೆಡೆ ವಿಫಲ ಯತ್ನ ಕೂಡ ನಡೆದಿದೆ.
ಸಿ ಸಿ ಕ್ಯಾಮರ, ಡಿ ವಿಆರ್, ನಗದು ಸಹಿತ ಇತರೆ ಸೊತ್ತುಗಳು ಕಳವುಗೈಯಲಾಗಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.





