ಕುಡಿದು ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದ ಪತಿ: ಮನನೊಂದ ಪತ್ನಿ ನೇಣಿಗೆ ಶರಣು
ಚಾಮರಾಜನಗರ: ಕುಡಿದು ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದ ಪತಿಯಿಂದಾಗಿ ಪತ್ನಿ ನೇಣಿಗೆ ಕೊರಳೊಡ್ಡಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.
ರೂಪಾ (32) ಆತ್ಮಹತ್ಯೆಗೆ ಶರಣಾದಾಕೆ. ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ. ರೂಪಾ 6 ವರ್ಷದ ಹಿಂದೆ ಮಂಜುನಾಥ್ ನನ್ನು ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹದಿಂದಾಗಿ ನೇಣು ಬಿಗಿದುಕೊಂಡು ರೂಪಾ ಸಾವಿನ ದಾರಿ ಹಿಡಿದಿದ್ದಾರೆ




