“ಪ್ರತಿದಿನ” ವೆಬ್ಸೈಟ್ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್: ಸುದ್ದಿ ತಿರುಚಿದವರ ವಿರುದ್ಧ ಕಾನೂನು ಕ್ರಮ
ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎನ್ನುವ ಸುದ್ದಿಯನ್ನು prthidina.com ಪ್ರಕಟಿಸಿತ್ತು. ಅದರ ಸ್ಕೀನ್ ಶಾಟ್ ಬಳಸಿ, ದಿನಾಂಕವನ್ನು ತಿರುಚಿ ಕಿಡಿಗೇಡಿಗಳು ಸುಳ್ಳು ಸಂದೇಶ ಹರಡುತ್ತಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ‘ಪ್ರತಿದಿನ’ ಮುಂದಾಗಿದೆ.
ದ.ಕ. ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಜು. 5,6ರಂದು ಜಿಲ್ಲಾಡಳಿತವು ರಜೆ ಘೋಷಿಸಿತ್ತು.
ಈ ಬಗ್ಗೆ ಪ್ರಕಟವಾದ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಗಳಾದ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ಗಳಲ್ಲಿ ಸುಳ್ಳು ಸಂದೇಶಗಳನ್ನು ಹರಡಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು ಮತ್ತು ಯಾವುದೇ ಸುದ್ದಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಬೇಕು.
‘ಪ್ರತಿದಿನ’ ವೆಬ್ ತಾಣದ ಸ್ಕ್ರೀನ್ ಶಾಟ್ ತೆಗೆದು ಎಡಿಟ್ ಮಾಡಿದ ಫೋಟೊವನ್ನು ಹಂಚಿದ, ಸುಳ್ಳು ಸಂದೇಶ ಹರಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಲಾಗುವುದು.




