February 4, 2026

ಪುತ್ತೂರು: ಕುಂಬ್ರದಲ್ಲಿ 50 ವರ್ಷ ಹಳೆಯ ಬಾವಿ ಕುಸಿತ

0
image_editor_output_image1907665159-1688652809339.jpg

ಪುತ್ತೂರು: ಭಾರೀ ಮಳೆಗೆ ಕುಂಬ್ರದ ನೂತನ ಪಂಚಾಯತ್ ಕಟ್ಟಡದ ಬಳಿ ಇದ್ದ ಸುಮಾರು 50 ವರ್ಷ ಹಳೆಯ ಬಾವಿ ಜು.6 ರಂದು ಸಂಪೂರ್ಣ ಕುಸಿತಗೊಂಡಿದೆ.

ಇತ್ತೀಚೆಗೆ ಒಳಮೊಗ್ರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣದ ವೇಳೆ ಈ ಬಾವಿಯನ್ನು ನವೀಕರಣಗೊಳಿಸಿದ್ದರು. ಇದೀಗ ಬಾವಿಯು ಸಂಪೂರ್ಣ ಭೂಮಿಯೊಳಗೆ ಕುಸಿತಗೊಂಡಿದೆ.

ಇನ್ನು ಈ ಬಾವಿಯ ಪಕ್ಕದಲ್ಲೇ ವಿದ್ಯುತ್ ಕಂಬ ಇದ್ದು ಕಂಬದ ಬದಿಯ ತನಕ ಬಾವಿ ಕುಸಿತಗೊಂಡಿದೆ. ಇನ್ನಷ್ಟು ಭೂ ಕುಸಿತ ಆಗುವ ಸಂಭವವಿದ್ದು ಇದರಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗುವ ಅಪಾಯವಿದೆ.

ಪಕ್ಕದಲ್ಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ಇದೇ ರಸ್ತೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮುಂದೆ ಸಂಭವಿಸುವ ಅಪಾಯವನ್ನು ತಪ್ಪಿಸುವಂತೆ ಸಾರ್ವಜನಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!