March 26, 2026

ವಿಟ್ಲ: ಮನೆಯ ಮೇಲೆ ಕುಸಿದು ಬಿದ್ದ ಕಾಂಪೌಂಡ್, ಅಪಾರ ನಷ್ಟ

0
IMG-20230705-WA0011.jpg

ವಿಟ್ಲ : ಕಾಂಪೌಂಡ್ ತಡೆಗೋಡೆ ಮನೆಯ ಮೇಲೆ ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆ ವಿಟ್ಲ ಸಮೀಪದ ಚಂದಳಿಕೆಯಲ್ಲಿ ನಡೆದಿದೆ.

ಚಂದಳಿಕೆ ನಿವಾಸಿ ಕೃಷ್ಣಪ್ಪ ಮಡಿವಾಳ ರವರ ಮನೆಗೆ ಕಾಂಪೌಂಡ್ ತಡೆಗೋಡೆ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಕೃಷ್ಣಪ್ಪ ರವರ ಮನೆಯ ಸಮೀಪ ಸ್ಥಳೀಯ ವ್ಯಕ್ತಿಯೋರ್ವರ ಹಾರ್ಡ್ ವೇರ್ & ಫರ್ನಿಚರ್ ಮಳಿಗೆ ಇದ್ದು, ಅವರು ಭಾರೀ ಮಟ್ಟದ ಎಂ ಸ್ಯಾಂಡ್ ಅನ್ನು ತಡೆಗೋಡೆಗೆ ಒತ್ತಿ ಶೇಖರಣೆ ಮಾಡಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಎಂ ಸ್ಯಾಂಡ್ ನಲ್ಲಿ ನೀರು ತುಂಬಿ ಅದರ ಭಾರದಿಂದ ರಾತ್ರಿ ವೇಳೆ ಮನೆ ಮೇಲೆ ಕಾಂಪೌಂಡ್ ತಡೆಗೋಡೆ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗೆ ಅನಾಹುತ ಸಂಭವಿಸಿದರೆ ಸಹಾಯವಾಣಿ ಸಂಖ್ಯೆ 08255239220 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!