February 4, 2026

ಉಜಿರೆ: ಮನೆಯಲ್ಲಿ ಕುಸಿದು ಬಿದ್ದು ಗೃಹಣಿ ಮೃತ್ಯು

0
image_editor_output_image-973483514-1688451361350.jpg

ಉಜಿರೆ: ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋದ್ಯಮ ವಿ‌ಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಜು.3 ರಂದು ಹೃದಯಾಘಾತದಿಂದ ಉಜಿರೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಮಧ್ಯಾಹ್ನ 12.40 ರ ಸುಮಾರಿಗೆ ಸುವರ್ಣಾ ಹೆಗ್ಡೆ ಅವರು ಮನೆಯಲ್ಲಿ ಕುಸಿದು ಬಿದ್ದಿರುವುದನ್ನು ನೋಡಿದ ಪುತ್ರ ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು ಅದಾಗಲೇ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಖಚಿತ ಪಡಿಸಿದ್ದರು.

ಮೂಲತಃ ಹೊನ್ನಾವರದವರಾದ ಅವರು ಪ್ರಸ್ತುತ ಉಜಿರೆ ಉಂಡ್ಯಾಪು ನಗರದಲ್ಲಿ ನೆಲೆಸಿದ್ದರು. ಮೃತರು ಎಸ್ ಡಿಎಂ ಪತ್ರಿಕೋದ್ಯಮ ವಿ‌ಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಸಹಿತ ಓರ್ವ ಪುತ್ರ ಶಶಾಂಕ್ ಹೆಗ್ಡೆ ಹಾಗೂ ತಂದೆ, ತಾಯಿ, ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!