February 4, 2026

ಪುತ್ತೂರು: ಅಪಘಾತದಲ್ಲಿ ಪುತ್ರ ಗಂಭೀರ: ಮನನೊಂದು ತಾಯಿ ಆತ್ಮಹತ್ಯೆ

0
dead-4-1.jpg

ಪುತ್ತೂರು: ಮಗ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಬೆನ್ನಲ್ಲೇ ತಾಯಿ ನೇಣಿಗೆ ಶರಣಾಗಿರುವ ಘಟನೆ ಫುರುಷರಕಟ್ಟೆಯ ಇಂದಿರಾನಗರದಲ್ಲಿ ಬೆಳಕಿಗೆ ಬಂದಿದೆ.

ಇಂದಿರಾನಗರದ ದಿ.ಪ್ರವೀಣ್‌ ಅವರ ಪತ್ನಿ ಕಾವ್ಯಾ(38) ಆತ್ಮಹತ್ಯೆ ಮಾಡಿಕೊಂಡವರು.

7ವರ್ಷದ ಹಿಂದೆ ಕಾವ್ಯಾ ಅವರ ಪತಿ ಪ್ರವೀಣ್‌ ಕೂಡ ಯಾವುದೋ ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಸ್ಥಳದಲ್ಲಿ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಕಾವ್ಯಾ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದ್ದು, ಅವರ ಪುತ್ರ ಪ್ರತೀಕ್‌ ಜೂ 30 ರಂದು ಬೆದ್ರಾಳ ಸಮೀಷ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನೋವಿನಲ್ಲಿದ್ದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತರು ಪುತ್ರ ಮತ್ತು ಪುತ್ರಿಯನ್ನ ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!