December 15, 2025

ವಿಟ್ಲ: ಆಟೋ ರಿಕ್ಷಾ ಅಡ್ಡಗಡ್ಡಿ ನಾಲ್ವರು ಯುವಕರಿಂದ ಹಲ್ಲೆ, ಜೀವ ಬೆದರಿಕೆ: ಇಬ್ಬರ ಬಂಧನ

0
IMG-20230627-WA0035.jpg

ವಿಟ್ಲ: ಬೈಕ್ ನಲ್ಲಿ ಬಂದ ನಾಲ್ವರು ಯುವಕರು ಆಟೋ ರಿಕ್ಷಾವನ್ನು ಅಡ್ಡಗಟ್ಟಿದ್ದು, ಈ ವೇಳೆ ಸಾಲೆತ್ತೂರಿನ ಹಿಂದು ನಾಯಕತ್ವದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಆಟೋದಲ್ಲಿದ್ದ ಜಯಂತ ಎಂಬವರ ಪತ್ನಿಯ ಮೈ ಮೇಲೆ ಯುವಕರು ಕೈ ಹಾಕಿ ದೂಡಿದಾಗ ಅದನ್ನು ತಡೆದ ಜಯಂತ ಅವರನ್ನು ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಮರದ ರೀಪಿನ ತುಂಡಿನಿಂದ ಮುಖಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಭಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮುನ್ನ @ ಸುದರ್ಶನ, ಶರತ್‌, ಧನರಾಜ್, ಉದಯ ಆರೋಪಿಗಳಾಗಿದ್ದು, ಈ ಪೈಕಿ ಸುದರ್ಶನ್
ಮತ್ತು ಧನರಾಜ್ ನನ್ನು ಬಂಧಿಸಲಾಗಿದೆ.

ಸಾಲೆತ್ತೂರಿನ ಪಾಲ್ತಾಜೆ ನಿವಾಸಿ ಜಯಂತ (32) ಎಂಬವರು ಜೂನ್ 25ರಂದು ಮಗುವಿನ ಚಿಕಿತ್ಸೆಗೆಂದು ಕ್ಲಿನಿಕ್ ಗೆ ಪತ್ನಿ ಮಧುಶ್ರೀ ರವರೊಂದಿಗೆ ಶಿವರಾಮ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾದಲ್ಲಿ ತೆರಲುತ್ತಿದ್ದಾಗ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿ ಬಳಿ ಸಾಲೆತ್ತೂರು ವೈನ್ ಶಾಪ್ ಕಡೆಯಿಂದ ಎರಡು ಬೈಕ್ ಗಳಲ್ಲಿ ಮುನ್ನ ಯಾನೆ ಸುದರ್ಶನ್, ಶರತ್, ಧನು ಮತ್ತು ಉದಯ ರವರು ಬಂದು ಆಟೋ ರಿಕ್ಷಾವನ್ನು ಅಡ್ಡಗಟ್ಟಿ ಸಾಲೆತ್ತೂರಿನ ಹಿಂದು ನಾಯಕತ್ವದ ವಿಚಾರದಲ್ಲಿ ಮಾತಿಗೆ ಮಾತು ಬೆಳದಾಗ ಮುನ್ನ ಯಾನೆ ಸುದರ್ಶನನು ಜಯಂತ ಅವರ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ಜಯಂತ್ ಅವರು ಅದನ್ನು ತಡೆದ ಸಂಧರ್ಭದಲ್ಲಿ ಶರತ್, ಧನು ಮತ್ತು ಉದಯ ರವರು ಆಟೋ ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಶರತ್ ನು ಅಲ್ಲೆ ಇದ್ದ ಮರದ ರೀಪಿನ ತುಂಡಿನಿಂದ ಜಯಂತ ಮುಖಕ್ಕೆ ಹೊಡೆದು ಮೂಗಿಗೆ ಕೈಯಿಂದ ಗುದ್ದಿ, ಸೊಂಟಕ್ಕೆ ಕಾಲಿನಿಂದ ತುಳಿದು ಹಲ್ಲೆ ನಡೆಸಿ ಈ ಬಾರಿ ಬದುಕಿದ್ದೀಯಾ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!