ನಟ ಜೂ.ಎನ್‌ಟಿಆರ್ ಅಭಿಮಾನಿ ಆತ್ಮಹತ್ಯೆ
ಹೈದರಾಬಾದ್: ಟಾಲಿವುಡ್ ನಟ ಜೂ.ಎನ್‌ಟಿಆರ್ ಅವರ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಜೂ.ಎನ್‌ಟಿಆರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಶ್ಯಾಮ್ (20) ಭಾನುವಾರ ಆಂಧ್ರಪ್ರದೇಶದ ಕೋನಸೀಮಾದಲ್ಲಿನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಕೆಲ ಟಿಡಿಪಿ ನಾಯಕರು ಶ್ಯಾಮ್ ಅವರ ಸಾವು ಆತ್ಮಹತ್ಯೆಯಿಂದ ಆದದ್ದಲ್ಲ, ಅದೊಂದು ವ್ಯವಸ್ಥಿತ ಕೊಲೆ. ಇದರಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.





