March 24, 2026

ಬೆಳ್ತಂಗಡಿ: ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿವಾಹಿತ ಮಹಿಳೆ ಮಗನೊಂದಿಗೆ ನಾಪತ್ತೆ

0
image_editor_output_image1289622339-1687582226888.jpg

ಬೆಳ್ತಂಗಡಿ: ಗುರುವಾಯನಕೆರೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ವಿವಾಹಿತ ಮಹಿಳೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಾರೆ.

ಕಡಬ ತಾಲೂಕಿನ ಬೆಳ್ಳಂದೂರು ಗ್ರಾಮದ ನಿವಾಸಿ ನವೀನ್ ಕೆ ಆರ್ ಅವರ ಪತ್ನಿ ಕವನ(25) ಜೂ.6ರಂದು ರಾತ್ರಿ ಊಟ ಮುಗಿಸಿ ಜೂನ್ 6 ರಂದು ಮಲಗಿದ್ದರು. ಆದರೆ, ಬೆಳಗ್ಗೆ ಪತಿ ಎದ್ದು ನೋಡಿದಾಗ ನಾಲ್ಕು ವರ್ಷದ ಮಗ ಹಾಗೂ ಪತ್ನಿ ನಾಪತ್ತೆಯಾಗಿದ್ದರು.

2022ರಲ್ಲಿಯೂ ಕವನಾ ನಾಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರು ಆಕೆಯನ್ನು ಪರಿಚಯಸ್ಥರ ಜೊತೆಗೆ ಪತ್ತೆ ಹಚ್ಚಿದ್ದರು. ಈಗ ಮತ್ತೆ ನಾಪತ್ತೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!