ನಟಿ ಪರ್ಲಿ ಮಾನಿ ಮನೆಗೆ ಐಟಿ ದಾಳಿ
ಕೇರಳ: ಐಟಿ ಅಧಿಕಾರಿಗಳು ಯೂಟ್ಯೂಬರ್ಸ್ ಮನೆ ಮೇಲೆ ದಾಳಿ ಮಾಡಿದ್ದು, ತೆರಿಗೆ ಕಟ್ಟದ ಯೂಟ್ಯೂಬರ್ಸ್ ಗೆ ಚಳಿ ಬಿಡಿಸಿದ್ದಾರೆ. ಅಲ್ಲದೇ, ಕೆಲವರಿಗೆ ನೋಟಿಸ್ ಕೂಡ ನೀಡಿದ್ದಾರೆ. ಈ ಯೂಟ್ಯೂಬರ್ಸ್ ಗಳಲ್ಲಿ ನಟಿ ಪರ್ಲಿ ಮಾನಿ ಕೂಡ ಇದ್ದಾರೆ.
ಕೇರಳದ ಐಟಿ ಅಧಿಕಾರಿಗಳು ನಿನ್ನೆ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದು, ಕೇರಳದ ಪ್ರಸಿದ್ಧ ಯೂಟ್ಯೂಬರ್ಸ್ ಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿರುವ ಪ್ರಸಿದ್ದರ ಪೈಕಿ ನಟಿ ಪರ್ಲಿ ಮಾನಿ ಮನೆ ಕೂಡ ಇದೆ. ಪರ್ಲಿ ಕೇರಳದ ಪ್ರಸಿದ್ದ ನಟಿ, ನಿರೂಪಕಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.





