ಬಜ್ಪೆ: ಖಾಸಗಿ ಬಸ್ಸೊಂದು ಢಿಕ್ಕಿ: ಬ್ಯಾಂಕ್ ಉದ್ಯೋಗಿ ಸಾವು
ಬಜ್ಪೆ: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗುರುಪುರದಲ್ಲಿ ನಡೆದಿದೆ.
ಮೃತರನ್ನು ಪೊಳಲಿ ಕರಿಯಂಗಳ ನಿವಾಸಿ ದಿ.ಅಣ್ಣಿ ಪೂಜಾರಿ ಎಂಬವರ ಪುತ್ರ ಸಂತೋಷ್ (38) ಎಂದು ಗುರುತಿಸಲಾಗಿದೆ.
ವಾಮಂಜೂರಿನ ಸಹಕಾರಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಸಂತೋಷ್, ಇಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಬೈಕಿನಲ್ಲಿ ಬ್ಯಾಂಕಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಗುರುಪುರ ಬ್ಯಾಂಕ್ ಬಳಿ ರಸ್ತೆಯ ಹಂಪ್ಸ್ ಬಳಿ ಬೈಕ್ ವೇಗ ಕಡಿಮೆಗೊಳಿಸಿದಾಗ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.




